AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಮ್ಮದಿಯಾಗಿ ಬದುಕಲು ಬಿಡ್ತಿಲ್ಲ: ಜಿಲ್ಲಾಧಿಕಾರಿ ಮುಂದೆ ಬಿಕ್ಕಿಬಿಕ್ಕಿ ಅತ್ತ ಮಹಿಳೆ

ನೆಮ್ಮದಿಯಾಗಿ ಬದುಕಲು ಬಿಡ್ತಿಲ್ಲ: ಜಿಲ್ಲಾಧಿಕಾರಿ ಮುಂದೆ ಬಿಕ್ಕಿಬಿಕ್ಕಿ ಅತ್ತ ಮಹಿಳೆ

ಭಾವನಾ ಹೆಗಡೆ
|

Updated on: Sep 21, 2025 | 12:09 PM

Share

ಹಾಸನದ ಡಿಸಿ ಕಛೇರಿಯಲ್ಲಿ ನಡೆದ ಜನ ಸ್ಫಂದನ ಸಭೆಯಲ್ಲಿ ಭಾಗಿಯಾದ ಜಿಲ್ಲೆಯ ಆಲೂರಿನ ಮಹಿಳೆಯೊಬ್ಬರು, ಡಿಸಿ ಎದುರು ಕಣ್ಣೀರಿಟ್ಟಿದ್ದಾರೆ. ಏಕೆಂದರೆ ಅವರ ಮನೆಗೆ ಅನಾಮಿಕ ಪತ್ರಗಳು ಬರುತ್ತಿವೆ ಅಂತೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜವಾಗಿಲ್ಲವಂತೆ. ಈ ಸಮಸ್ಯೆಯನ್ನು ಹೇಳುತ್ತಾ ಜಿಲ್ಲಾಧಿಕಾರಿ ಮುಂದೆ ಮಹಿಳೆ ಕಣ್ಣೀರಿಟ್ಟಿದ್ದಾರೆ.

ಹಾಸನ, ಸೆಪ್ಟೆಂಬರ್ 20: ಶನಿವಾರ ಹಾಸನದ ಡಿಸಿ ಕಛೇರಿಯಲ್ಲಿ ನಡೆದ ಜನ ಸ್ಪಂದನ‌‌ ಸಭೆಯಲ್ಲಿ ಆಲೂರಿನ ಮಹಿಳೆಯಬ್ಬರು ಡಿಸಿ ಮುಂದೆ ಕಣ್ಣೀರಿಟ್ಟಿದ್ದಾರೆ. ಮಹಿಳೆ ಮನೆಗೆ ಅನಾಮಿಕ ಪತ್ರಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಜಿಲ್ಲಾಧಿಕಾರಿ ಲತಾ ಕುಮಾರಿ ಮುಂದೆ ಕಣ್ಣೀರಿಟ್ಟಿದ್ದಾರೆ. ಮಹಿಳೆ‌ಯ ಸಮಸ್ಯೆ ಆಲಿಸಿದ ಡಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ವೀಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ