ಶಾಲೆಗಳನ್ನು ಕಟ್ಟಲು ಕೋಟ್ಯಾಂತರ ಬೆಲೆಬಾಳುವ ಜಮೀನುಗಳನ್ನು ದೇಣಿಗೆ ನೀಡಿದ್ದೇನೆ, ಕುಮಾರಸ್ವಾಮಿ ನೀಡಿದ್ದಾರಾ? ಶಿವಕುಮಾರ್
ರಾಮನಗರ ಜಿಲ್ಲೆಯ ಜನಕ್ಕೆ ತಾವು ಮಾಡಿದ ಸಹಾಯಗಳನ್ನು ಪಟ್ಟಿ ಮಾಡಲು ಮುಂದಾದ ಶಿವಕುಮಾರ್, ಮೂರ್ನಾಲ್ಕು ಹಳ್ಳಿಗಳ ಹೆಸರುಗಳನ್ನು ಹೇಳಿ ಕೆಲವು ಕಡೆ ಮೂರು, ಮತ್ತೊಂದು 5 ಎಕರೆ ಜಮೀನುಗಳನ್ನು ಶಾಲಾ ಕಾಲೇಜುಗಳನ್ನು ಕಟ್ಟಲು ದೇಣಿಗೆ ನೀಡಿದ್ದಾಗಿ ಹೇಳಿದರು. ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ದಾನ ನೀಡಿದ್ದೇನೆ ಎಂದರು.
ರಾಮನಗರ: ತಮ್ಮ ಚುನಾವಣಾ ಪ್ರಚಾರ ವಾಹನದಲ್ಲೇ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತದಾರಿಗೆ ಹಣ ಹಂಚುವ ಅನಿವಾರ್ಯತೆ ತಮಗಿಲ್ಲ, ರಾಮನಗರದ ಜನ (people of Ramanagara) ತಮ್ಮನ್ನು ಮನೆಮಗನಂತೆ ಬೆಳೆಸಿದ್ದಾರೆ ಮತ್ತು ಅದೇ ವಿಶ್ವಾಸದಿಂದ ಡಿಕೆ ಸುರೇಶ್ ಗೆ (DK Suresh) ವೋಟು ಹಾಕುತ್ತಾರೆ ಎಂದು ಹೇಳಿದರು. ರಾಮನಗರ ಜಿಲ್ಲೆಯ ಜನಕ್ಕೆ ತಾವು ಮಾಡಿದ ಸಹಾಯಗಳನ್ನು ಪಟ್ಟಿ ಮಾಡಲು ಮುಂದಾದ ಶಿವಕುಮಾರ್, ಮೂರ್ನಾಲ್ಕು ಹಳ್ಳಿಗಳ ಹೆಸರುಗಳನ್ನು ಹೇಳಿ ಕೆಲವು ಕಡೆ ಮೂರು, ಮತ್ತೊಂದು 5 ಎಕರೆ ಜಮೀನುಗಳನ್ನು ಶಾಲಾ ಕಾಲೇಜುಗಳನ್ನು ಕಟ್ಟಲು ದೇಣಿಗೆ ನೀಡಿದ್ದಾಗಿ ಹೇಳಿದರು. ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ದಾನ ನೀಡಿದ್ದೇನೆ, ಇಂಥ ಕೆಲಸವೇನಾದರೂ ಕುಮಾರಸ್ವಾಮಿ ಮಾಡಿದ್ದಾರೆಯೇ ಎಂದು ಶಿವಕುಮಾರ್ ಕೇಳಿದರು. ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತೊಂದರೆ ಕೊಡುತ್ತಿದ್ದಾರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರಲ್ಲ? ಅವರ ಮನೆಗಳ ಮೇಲೆ ಐಟಿ ಇಲಾಖೆ ಯಾಕೆ ದಾಳಿ ಮಾಡುತ್ತಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟಿಕೆಟ್ ವಂಚಿತ ಬಿಜೆಪಿ ಸಂಸದರಿಗೆ ಗೋವಿಂದ ಗೋವಿಂದ ಎಂದು ಡಿಕೆ ಶಿವಕುಮಾರ್ ವ್ಯಂಗ್ಯ