ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿರುವುದಕ್ಕೆ ಕಾರಣಗಳನ್ನು ಅಮಿತ್ ಶಾಗೆ ತಿಳಿಸಿದ್ದೇನೆ: ಕೆಎಸ್ ಈಶ್ವರಪ್ಪ

|

Updated on: Apr 02, 2024 | 1:49 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಒಂದೇ ಕುಟುಂಬದ ಹಿಡಿತದಿಂದ ತಪ್ಪಿಸಲು ಹೋರಾಟ ನಡೆಸಿದರು. ಹಾಗೆಯೇ ರಾಜ್ಯದಲ್ಲಿ ಬಿಜೆಪಿಯ ಎಲ್ಲ ವ್ಯವಹಾರಗಳು ಒಂದೇ ಕುಟುಂಬದ ಅಧೀನದಲ್ಲಿರುವುದರಿಂದ ಅದನ್ನು ತಪ್ಪಿಸಲು ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಶಾ ಅವರಿಗೆ ಹೇಳಿರುವೆನೆಂದು ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ: ಬಿಜೆಪಿ ವರಿಷ್ಠ ಅಮಿತ್ ಶಾರನ್ನು (Amit Shah ) ಉಕ್ಕಿನ ಮನುಷ್ಯ ಎಂದು ಸಂಬೋಧಿಸಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ಕೇಂದ್ರ ಗೃಹ ಸಚಿವ ತಮಗೆ ಇಂದು ಬೆಳಗ್ಗೆ ಫೋನ್ ಮಾಡಿದ್ದರು ಎಂದು ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಪಕ್ಷದ ಒಬ್ಬ ಹಿರಿಯ ನಾಯಕನಾಗಿರುವ ತಾನು ಪಕ್ಷೇತರ ಅಭ್ಯರ್ಥಿಯಾಗಿ (independent candidate) ಸ್ಪರ್ಧಿಸುತ್ತಿರೋದು ಯಾಕೆ ಎಂದು ಪ್ರಶ್ನಿಸಿದರು ಅಂತ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಒಂದೇ ಕುಟುಂಬದ ಹಿಡಿತದಿಂದ ತಪ್ಪಿಸಲು ಹೋರಾಟ ನಡೆಸಿದರು. ಹಾಗೆಯೇ ರಾಜ್ಯದಲ್ಲಿ ಬಿಜೆಪಿಯ ಎಲ್ಲ ವ್ಯವಹಾರಗಳು ಒಂದೇ ಕುಟುಂಬದ ಅಧೀನದಲ್ಲಿರುವುದರಿಂದ ಅದನ್ನು ತಪ್ಪಿಸಲು ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಶಾ ಅವರಿಗೆ ಹೇಳಿರುವೆನೆಂದು ಈಶ್ವರಪ್ಪ ತಿಳಿಸಿದರು.

ರಾಜ್ಯ ಬಿಜೆಪಿ ಕಾರ್ಯಕರ್ತರು ಕುಟುಂಬ ರಾಜಕಾರಣದಿಂದ ನೊಂದಿದ್ದಾರೆ, ಬಿಜೆಪಿಯಲ್ಲೂ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿರುವುದು ಅವರಿಂದ ಸಹಿಸಲಾಗುತ್ತಿಲ್ಲ, ಮತ್ತು ರಾಜ್ಯದಲ್ಲಿ ಹಿಂದೂತ್ವದ ಪರ ಧ್ವನಿಯೆತ್ತುವವರನ್ನು ಕಡೆಗಣಿಸಲಾಗುತ್ತಿರುವ ಅಂಶವೂ ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಕಾರಣ ಅಂತ ಶಾ ಅವರಿಗೆ ಹೇಳೀದ್ದೇನೆ ಅಂತ ಈಶ್ವರಪ್ಪ ಪತ್ರಕರ್ತರಿಗೆ ತಿಳಿಸಿದರು. ಹಿಂದುಳಿದ ವರ್ಗಗಳ ನಾಯಕರನ್ನು ಕಡೆಗಣಿಸುತ್ತಿರುವ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: