ಶಿವಪ್ರಕಾಶ್ ಯಾರು ಅನ್ನೋದೇ ಗೊತ್ತಿಲ್ಲ, ದೂರು ಕೊಟ್ಟ ಮಾತ್ರಕ್ಕೆ ಎಫ್​ಐಅರ್ ಆಗುತ್ತದೆಯೇ? ಭೈರತಿ ಬಸವರಾಜ

Updated on: Jul 16, 2025 | 1:00 PM

ಹತ್ಯೆಗೀಡಾಗಿರುವ ಶಿವಪ್ರಕಾಶ್ ತಾಯಿ ನೀಡಿರುವ ದೂರಿನನ್ವಯ ಶಾಸಕ ಭೈರತಿ ಬಸವರಾಜ, ಜಗದೀಶ್, ಕಿರಣ್, ವಿಮಲ್, ಮತ್ತು ಅನಿಲ್ ವಿರುದ್ಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಅರ್ ದಾಖಲಾಗಿದೆ. ಜಮೀನು ವಿಷಯಕ್ಕೆ ಕೊಲೆ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದ್ದರೂ ಬಸವರಾಜ ಮಾತ್ರ ಯಾವ ಜಮೀನು ಅನ್ನೋದೇ ತನಗೆ ಗೊತ್ತಿಲ್ಲ ಎಂದು ಸಿಡಿಮಿಡಿಗೊಂಡು ಹೇಳುತ್ತಾರೆ.

ಬೆಂಗಳೂರು, ಜುಲೈ 16: ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಭಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಅರ್ ಪೇಟೆ ಬಿಜೆಪಿ ಶಾಸಕ ಭೈರತಿ ಬಸವರಾಜ್ (Byrathi Basavaraj) ವಿರುದ್ಧ ಎಫ್​ಐಅರ್ ದಾಖಲಾಗಿದೆ. ನಮ್ಮ ಬೆಂಗಳೂರು ವರದಿಗಾರನ ಜೊತೆ ಮಾತಾಡಿರುವ ಶಾಸಕ ಬಸವರಾಜ್, ಶಿವಪ್ರಕಾಶ್ ಅನ್ನೋನು ಯಾರು ಅನ್ನೋದೇ ಗೊತ್ತಿಲ್ಲ, ದೂರು ಕೊಟ್ಟ ಮಾತ್ರಕ್ಕೆ ತಮ್ಮ ವಿರುದ್ಧ ಕೇಸ್ ದಾಖಲಿಸಲಾಗಿದೆ, ಇದರ ಹಿಂದೆ ರಾಜಕೀಯ ಕುತಂತ್ರ ಇರೋದು ಸ್ಪಷ್ಟವಾಗಿ ಕಾಣುತ್ತಿದೆ, ತಾನು ಗೃಹ ಸಚಿವರ ಜೊತೆ ಮಾತಾಡಿ ಕಾನೂನು ಹೋರಾಟ ಮಾಡೋದಾಗಿ ಹೇಳಿದರು. ತನಗೆ ಜೀವ ಬೆದರಿಕೆ ಇದೆಯೆಂದು ಶಿವಪ್ರಕಾಶ್ ದೂರು ಕೊಟ್ಟಿದ್ದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತನ್ನ ವಿಚಾರಣೆಗೆ ಯಾಕೆ ಬರಲಿಲ್ಲ, ಇದು ರಾಜಕೀಯ ಪಿತೂರಿ ಅಲ್ಲದೆ ಮತ್ತೇನೂ ಅಲ್ಲ ಎಂದು ಭೈರತಿ ಬಸವರಾಜ್ ಹೇಳಿದರು

ಇದನ್ನೂ ಓದಿ:   ಡಿಕೆ ಶಿವಕುಮಾರ್​ ಎದುರೇ ಬಿಜೆಪಿ ಶಾಸಕ ಭೈರತಿ ಬಸವರಾಜ್​​ಗೆ ಮಹಿಳೆ ಖಡಕ್​ ಕ್ಲಾಸ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ