ಚನ್ನರಾಯಪಟ್ಟಣ ಬಳಿ ಚಳುವಳಿ; ಪ್ರತಿಭಟನೆ ಮಾಡುತ್ತಿರುವವರಲ್ಲಿ 10 ದಿನ ಸಮಯ ಕೇಳಿದ್ದೇನೆ: ಸಿದ್ದರಾಮಯ್ಯ

Edited By:

Updated on: Jul 04, 2025 | 3:34 PM

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಹಗುರವಾಗಿ ಮಾತಾಡಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಸ್ಥಳದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದಾರಾಮಯ್ಯ ವಾಪಸ್ಸು ಬಂದು, ವಿಷಯ ಕಾನೂನು ಇಲಾಖೆ ವ್ಯಾಪ್ತಿಗೆ ಬರುತ್ತದೆ, ಪೊಲೀಸರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಬೆಂಗಳೂರು, ಜುಲೈ 4: ದೇವನಹಳ್ಳಿ ತಾಲೂಕಿನ ಚನ್ನಾರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್​ ತಲೆಯೆತ್ತುವುದನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತಮುಖಂಡರೊಂದಿಗೆ (farmer leaders) ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದರು. ಚಳುವಳಿಯಲ್ಲಿ ಅನೇಕ ಸಂಸ್ಥೆಗಳು ಮತ್ತು ಹೋರಾಟಗಾರರು ಭಾಗವಹಿಸಿದ್ದಾರೆ, ಆದರೆ ಪ್ರಸ್ತಾಪಿತ ಏರೋಸ್ಪೇಸ್ ಪಾರ್ಕ್ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಜಾರಿಯಾಗಿರುವುದರಿಂದ ಕೆಲವು ಕಾನೂನಾತ್ಮಕ ಅಡೆತಡೆಗಳಿಗೆ, ಹಾಗಾಗಿ ಚಳುವಳಿ ನಿರತವರ ಬಳಿ 10-ದಿನ ಕಾಲಾವಕಾಶ ಕೇಳಿದ್ದೇನೆ, ಜುಲೈ 15 ರಂದು ಅವರೊಂದಿಗೆ ಮತ್ತೊಮ್ಮೆ ಸಭೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ