ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಂದ ಹೆಚ್ಚಿನ ವಿವರ ಕೇಳಿದ್ದೇನೆ: ಜಿ ಪರಮೇಶ್ವರ್

Updated on: Apr 19, 2025 | 11:53 AM

ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಅರೋಪ ಮಾಡಿರುವ ಪ್ರತಿಪಕ್ಷಗಳ ಬಗ್ಗೆ ತೀಕ್ಷ್ಣವಾವ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಇವತ್ತು ಬೆಳಗ್ಗೆಯಷ್ಟೇ ಪೊಲೀಸ್ ಕಮೀಶನರ್ ಫೋನ್ ಮಾಡಿ ಅಪರಾಧಗಳ ವಿಷಯದಲ್ಲಿ ಬ್ರೀಫ್ ಮಾಡುತ್ತಿದ್ದರು, ಸೈಬರ್ ಕ್ರೈಮ್ ಸೇರಿದಂತೆ ಎಲ್ಲ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿವೆ, ಅರೋಪ ಮಾಡುವವರು ಅಂಕಿ ಅಂಶಗಳನ್ನು ನೋಡದೆ ಮಾಡಬಾರದು ಎಂದರು.

ಬೆಂಗಳೂರು, ಏಪ್ರಿಲ್ 19: ಭೂಗತ ಜಗತ್ತಿನ ದೊರೆ (underworld don) ಎನಿಸಿಕೊಂಡು ನಂತರ ಸಾಮಾಜಿಕ ಕಾರ್ಯಕರ್ತನಾಗಿ ಪರಿವರ್ತನೆಯಾದ ದಿವಂಗತ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ನಡೆದ ನಿನ್ನೆ ರಾತ್ರಿ ನಡೆದಿರುವ ಗುಂಡಿನ ದಾಳಿಯ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಹೆಚ್ಚಿನ ಮಾಹಿತಿಯನ್ನೇನೂ ನೀಡಲಿಲ್ಲ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ರಾತ್ರಿ ಸುಮಾರು 1.30-2.00 ಗಂಟೆ ಸಮಯದಲ್ಲಿ ರಿಕ್ಕಿಯ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆದಿದೆ, ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿದೆ, ಜೀವಕ್ಕೇನೂ ಅಪಾಯವಿಲ್ಲ, ಬಿಡದಿಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಹೆಚ್ಚಿನ ವಿವರಗಳನ್ನು ಕೇಳಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:  ರಿಕ್ಕಿ ರೈ ಮೇಲೆ ಮಾರಣಾಂತಿಕ ಹಲ್ಲೆ ನಡೆಯಲು ಮುತ್ತಪ್ಪ ರೈ ಮಾಡಿಟ್ಟ ಭಾರೀ ಆಸ್ತಿ ಕಾರಣವಾಯಿತೇ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ