Haveri: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಕಾಲಿಗೆ ಹಗ್ಗ ಸಿಲುಕಿಕೊಂಡು ದರದರನೆ ಎಳೆದುಕೊಂಡು ಹೋದ ಹೋರಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 14, 2022 | 8:58 AM

ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕ ಹೋರಿಗೆ ದಾರಿ ತೋರಿಸುವ ವೇಳೆ ಎತ್ತುಗಳು ದರದರನೆ ಎಳೆದುಕೊಂಡು ಹೋಗಿದೆ.

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು, ಹೋರಿಯನ್ನ ಬಿಡುವ ಸಂದರ್ಭದಲ್ಲಿ ಯುವಕನ ಕಾಲಿಗೆ ಹೋರಿಗೆ ಕಟ್ಟಿರುವ ಹಗ್ಗ ಸಿಕ್ಕಿಹಾಕಿಕೊಂಡಿದ್ದು, ದರದರನೆ ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 14, 2022 08:39 AM