ತಂದೆ ರಾಜಣ್ಣರ ಸೆಪ್ಟೆಂಬರ್ ಕ್ರಾಂತಿಯ ಗುಟ್ಟು ಬಿಚ್ಚಿಟ್ಟ ಪುತ್ರ ರಾಜೇಂದ್ರ..!
ಮಾಜಿ ಸಚಿವ ಕೆಎನ್ ರಾಜಣ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ ಎಂದು ಕೈ ಶಾಸಕ ಬಾಲಕೃಷ್ಣ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೀಗ ಇದಕ್ಕೆ ಸ್ವತಃ ರಾಜಣ್ಣ ಪುತ್ರ ಎಂಎಲ್ ಸಿ ರಾಜೇಂದ್ರ ಪ್ರತಿಕ್ರಿಯಿಸಿದ್ದು, ಬಾಲಕೃಷ್ಣ ಅವರೆಲ್ಲ ಬಿಜೆಪಿಗೆ ಸೇರುವುದೇ ಸೆಪ್ಟೆಂಬರ್ ಕ್ರಾಂತಿ. ಆ ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದು. ಸಿಎಂ ಸ್ಥಾನ ಕೊಡುತ್ತೇವೆ ಅಂದ್ರೆ ಇವರೆಲ್ಲರೂ ಬಿಜೆಪಿಗೆ ಹೋಗಬಹುದು.ಅದೇ ಕ್ರಾಂತಿ, ಬೇರೆನಲ್ಲ ಎಂದು ಬಾಲಕೃಷ್ಣಗೆ ತಿರಗೇಟು ನೀಡಿದರು.
ಬೆಂಗಳೂರು, (ಸೆಪ್ಟೆಂಬರ್ 02): ಮಾಜಿ ಸಚಿವ ಕೆಎನ್ ರಾಜಣ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ ಎಂದು ಕೈ ಶಾಸಕ ಬಾಲಕೃಷ್ಣ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದೀಗ ಇದಕ್ಕೆ ಸ್ವತಃ ರಾಜಣ್ಣ ಪುತ್ರ ಎಂಎಲ್ ಸಿ ರಾಜೇಂದ್ರ ಪ್ರತಿಕ್ರಿಯಿಸಿದ್ದು, ಬಾಲಕೃಷ್ಣ ಅವರೆಲ್ಲ ಬಿಜೆಪಿಗೆ ಸೇರುವುದೇ ಸೆಪ್ಟೆಂಬರ್ ಕ್ರಾಂತಿ. ಆ ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದು. ಸಿಎಂ ಸ್ಥಾನ ಕೊಡುತ್ತೇವೆ ಅಂದ್ರೆ ಇವರೆಲ್ಲರೂ ಬಿಜೆಪಿಗೆ ಹೋಗಬಹುದು.ಅದೇ ಕ್ರಾಂತಿ, ಬೇರೆನಲ್ಲ ಎಂದು ಬಾಲಕೃಷ್ಣಗೆ ತಿರಗೇಟು ನೀಡಿದರು.
ಸೆಪ್ಟೆಂಬರ್ ನಲ್ಲಿ ಅವರಿಗೆಲ್ಲ ಬ್ರೇನ್ ಮ್ಯಾಪಿಂಗ್ ಮಾಡಿಸಿ. ಯಾರು ಯಾರ ಜೊತೆಗೆ ಮಾತುಕತೆ ಮಾಡಿದ್ದಾರೆ ಚರ್ಚೆ ಮಾಡಿದ್ದಾರೆ ಯಾರ ಸಂಪರ್ಕದಲ್ಲಿದ್ದಾರೆ ಎಲ್ಲವೂ ಬ್ರೇನ್ ಮ್ಯಾಪಿಂಗ್ ಆಗಲಿ. ಸೆಪ್ಟೆಂಬರ್ ಕ್ರಾಂತಿಯದ್ದು ಎಲ್ಲ ಹೊರ ಬರಲಿ ಎಂದು ರಾಜೇಂದ್ರ ಹೇಳಿದರು.
Published on: Sep 02, 2025 06:01 PM
