ದೇವೇಗೌಡರು ಮೊದಲಿಂದಲೂ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ: ಡಿಕೆ ಸುರೇಶ್

|

Updated on: Apr 18, 2024 | 3:10 PM

ಕುಮಾರಸ್ವಾಮಿ ಕುಟುಂಬದಲ್ಲಿ ಯಾರು ಯಾರು ಕಲ್ಲು ಹೊಡೆದಿದ್ದಾರೆ, ಯಾರ ಜಮೀನು ಕಬಳಿಸಿದ್ದಾರೆ ಅನ್ನೋದನ್ನ ಮುಂದೆ ದಿನಗಳಲ್ಲಿ ತಿಳಿಸುತ್ತೇನೆ ಎಂದ ಸುರೇಶ್, ಕೇಂದ್ರದ ಏಜೆನ್ಸಿಗಳನ್ನು ತಮ್ಮ ಆಪ್ತರು ಮತ್ತು ಸ್ಥಳೀಯ ಮುಖಂಡರ ವಿರುದ್ಧ ಛೂ ಬಿಡುವ ಕೆಲಸ ನಡೆದಿದೆ, ಆದಾಯ ತೆರಿಗೆ ಅಧಿಕಾರಿಗಳು ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಅಂತ ಹೇಳಿದರು,

ಆನೇಕಲ್: ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ (HD Devegowda) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತನ್ನ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ, ಬೇರೆಯವರ ಆಸ್ತಿ ಕಬಳಿಸುವ ಮತ್ತು ಬಾಲಕಿಯನ್ನು ಅಪಹರಿಸುವ ದುಸ್ಥಿತಿ ನಮಗೆ ಬಂದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಹೇಳಿದರು. ಆನೇಕಲ್ ನಲ್ಲಿ ಪ್ರಚಾರ ಮಾಡುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ದೇವೇಗೌಡರು ಮೊದಲಿನಿಂದಲೂ ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ, ಅವರು ವಯಸ್ಸಲ್ಲಿ ತುಂಬಾ ದೊಡ್ಡವರಾಗಿರುವುದರಿಂದ ಹೆಚ್ಚು ಮಾತಾಡಲ್ಲ ಎಂದು ಸುರೇಶ್ ಹೇಳಿದರು. ಕುಮಾರಸ್ವಾಮಿ ಕುಟುಂಬದಲ್ಲಿ ಯಾರು ಯಾರು ಕಲ್ಲು ಹೊಡೆದಿದ್ದಾರೆ, ಯಾರ ಜಮೀನು ಕಬಳಿಸಿದ್ದಾರೆ ಅನ್ನೋದನ್ನ ಮುಂದೆ ದಿನಗಳಲ್ಲಿ ತಿಳಿಸುತ್ತೇನೆ ಎಂದ ಸುರೇಶ್, ಕೇಂದ್ರದ ಏಜೆನ್ಸಿಗಳನ್ನು ತಮ್ಮ ಆಪ್ತರು ಮತ್ತು ಸ್ಥಳೀಯ ಮುಖಂಡರ ವಿರುದ್ಧ ಛೂ ಬಿಡುವ ಕೆಲಸ ನಡೆದಿದೆ, ಆದಾಯ ತೆರಿಗೆ ಅಧಿಕಾರಿಗಳು ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ, ಅವರ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ, ಇದೆಲ್ಲ ನಿಲ್ಲದಿದ್ದರೆ ಆದಾಯ ತೆರಿಗೆ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಶಕಗಳಿಂದ ದೇವೇಗೌಡರ ಕುಟುಂಬ ನಮ್ಮ ಕುಟುಂಬದೊಂದಿಗೆ ಹಗೆ ಸಾಧಿಸುತ್ತಿದೆ: ಡಿಕೆ ಸುರೇಶ್