ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ: ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು

Edited By:

Updated on: Jul 20, 2026 | 5:44 PM

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ರಕ್ರಿಯೆ ಆಗಲಿದೆ. ಇದಕ್ಕೂ ಮುನ್ನ ಪತಿ ದೇವೇಗೌಡ ಮಾತನಾಡಿ, ಪತ್ನಿ ಬಗ್ಗೆ ಭಾವುಕ ಮಾತುಳನ್ನಾಡಿದ್ದಾರೆ. ರಂಗನಾಥನ ಸಾನ್ನಿಧ್ಯದಲ್ಲಿ ಸಮಾಧಿ ಮಾಡಲು ಮಕ್ಕಳ ನಿರ್ಧಾರ. ಪಡುವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವುದು ಇಚ್ಛೆಯಾಗಿತ್ತು. ಆದರೆ, ನಮ್ಮ ಮಕ್ಕಳ ತೀರ್ಮಾನದಂತೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿದೆ. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಅಂತ್ಯಕ್ರಿಯೆ ಮಾಡಲಾಗ್ತಿದೆ. ರಂಗನಾಥನ ಆಶೀರ್ವಾದದಿಂದ ನಾನು ಪ್ರಧಾನಿ ಆಗುವಂತಾಯ್ತು. ನಾನು ಪ್ರಧಾನಿಯಾಗಲು ಪತ್ನಿಯೂ ಕಾರಣವೆಂದು ಭಾವುಕರಾದರು.

ಹಾಸನ, (ಜುಲೈ 20): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD Devegowda) ಪತ್ನಿ ಚೆನ್ನಮ್ಮ ವಿಧಿವಶರಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ರಕ್ರಿಯೆ ಆಗಲಿದೆ. ಇದಕ್ಕೂ ಮುನ್ನ ಪತಿ ದೇವೇಗೌಡ ಮಾತನಾಡಿ, ಪತ್ನಿ ಬಗ್ಗೆ ಭಾವುಕ ಮಾತುಳನ್ನಾಡಿದ್ದಾರೆ. ರಂಗನಾಥನ ಸಾನ್ನಿಧ್ಯದಲ್ಲಿ ಸಮಾಧಿ ಮಾಡಲು ಮಕ್ಕಳ ನಿರ್ಧಾರ. ಪಡುವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ಮಾಡಬೇಕೆನ್ನುವುದು ಇಚ್ಛೆಯಾಗಿತ್ತು. ಆದರೆ, ನಮ್ಮ ಮಕ್ಕಳ ತೀರ್ಮಾನದಂತೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿದೆ. ಈ ಜಮೀನನ್ನು ಕ್ರಯಕ್ಕೆ ಬರೆಸಿಕೊಂಡು ಅಂತ್ಯಕ್ರಿಯೆ ಮಾಡಲಾಗ್ತಿದೆ. ರಂಗನಾಥನ ಆಶೀರ್ವಾದದಿಂದ ನಾನು ಪ್ರಧಾನಿ ಆಗುವಂತಾಯ್ತು. ನಾನು ಪ್ರಧಾನಿಯಾಗಲು ಪತ್ನಿಯೂ ಕಾರಣವೆಂದು ಭಾವುಕರಾದರು.

ನಾನು ಕಣ್ಣೀರು ಹಾಕಲ್ಲ ಮಾತನಾಡುತ್ತೇನೆ, ನನಗೆ ಶಕ್ತಿ ತುಂಬಿದ್ದೇ ಪತ್ನಿ. ನನ್ನ ಸ್ನೇಹಿತರಾದ ಡಾ.ಕೃಷ್ಣ, ಹೆಣ್ಣುಮಕ್ಕಳು, ಅಳಿಯಂದಿರು ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂದು ತೀರ್ಮಾನ ಮಾಡಿದರು. ಮಳೆ ಬರುತ್ತೆ ಅಂದುಕೊಂಡಿದ್ದರು, ಎಳ್ಳಷ್ಟು ತೊಂದರೆ ಆಗಲ್ಲ ಎಂದಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಶಕ್ತಿಕೊಟ್ಟವನು ರಂಗನಾಥಸ್ವಾಮಿ. ಒಂದೆಡೆ ರಂಗನಾಥ, ಮತ್ತೊಂದೆಡೆ ಕುಲದೇವರು ದೇವೇಶ್ವರನ ಆಶೀರ್ವಾದ. ನನ್ನ ಬೆಳವಣಿಗೆಗೆ ನಮ್ಮ ಕುಟುಂಬದ ಎಲ್ಲರೂ ಕಾರಣ. ನನ್ನ ಪತ್ನಿ ಚೆನ್ನಮ್ಮ ಅನ್ನಪೂರ್ಣೆ ಎಂದು ಉತ್ಪ್ರೇಕ್ಷೆಯಿಂದ ಹೇಳಲ್ಲ. ಅವರನ್ನು ಸ್ವಾಮಿಯ ಸಾನ್ನಿಧ್ಯಕ್ಕೆ ಕಳಿಸಿಕೊಡುತ್ತೇನೆ. ನನ್ನ ಬೆಳವಣಿಗೆಗೆ ಪ್ರತಿ ಹಂತದಲ್ಲೂ ಪತ್ನಿ ಚೆನ್ನಮ್ಮ ನೆರವಾದರು. ಇದನ್ನು ವಿಶ್ಲೇಷಣೆ ಮಾಡುವುದು ಕಷ್ಟ ಎಂದು ಗದ್ಗದಿತರಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 20, 2026 05:42 PM
Follow Us