ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಮಂಡ್ಯದ 87ನೇ ಕನ್ನಡ ಸಮ್ಮೇಳನದ ಕೊನೆ ದಿನವಾದ ಇಂದು(ಡಿಸೆಂಬರ್ 22) ಚಲುವರಾಯಸ್ವಾಮಿ ಹಾಗೂ ಎಚ್ಡಿ ಕುಮಾರಸ್ವಾಮಿ ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಕುಮಾರಣ್ಣ, ಚಲುವರಾಯಸ್ವಾಮಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ವೇದಿಕೆ ಮೇಲೆ ಒಂದೇ ಒಂದು ಮಾತುಕತೆ ನಡೆಸದ ರಾಜಕೀಯ ಬದ್ಧ ವೈರಿಯಾಗಿರುವ ಚಲುವರಾಯಸ್ವಾಮಿ ಕೆಲಸವನ್ನು ಹೊಗಳಿರುವುದು ಅಚ್ಚರಿ ಮೂಡಿಸಿದೆ.
ಮಂಡ್ಯ, (ಡಿಸೆಂಬರ್ 22): ಸಚಿವ ಚಲುವರಾಯಸ್ವಾಮಿ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಕುಚಿಕು ಗೆಳೆಯರು. ಈ ಹಿಂದೆ ಜೆಡಿಎಸ್ನಲ್ಲೇ ಇದ್ದ ಚಲುವರಾಯಸ್ವಾಮಿ ಕುಮಾರಸ್ವಾಮಿಗೆ ಅತ್ಯಾಪ್ತರಾಗಿದ್ದರು. ಆದ್ರೆ, ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಚಲುವರಾಯಸ್ವಾಮಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು. ಅಲ್ಲಿಂದು ಕುಮಾರಣ್ಣ ಹಾಗೂ ಚಲುವರಾಸ್ವಾಮಿ ನಡುವೆ ಒಂದಲ್ಲ ಒಂದು ಕಾರಣಕ್ಕೆ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಬಂದಿವೆ. ಇಬ್ಬರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು ಉಂಟು. ಆದ್ರೆ, ಇಂದು(ಡಿಸೆಂಬರ್ 22) ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Published on: Dec 22, 2024 08:36 PM
Latest Videos