ತುಮಕೂರು | ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತಾಡುವುದಿಲ್ಲ: ಎಚ್ ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ, ಮಾಜಿ ಉಪ ಮುಖ್ಯಮಂತ್ರಿ ಆಗಿದ್ದು ತಮ್ಮದೇ ಆದ ವರ್ಚಸನ್ನು ಹೊಂದಿದ್ದಾರೆ, ಹಾಗಾಗಿ ಅವರ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಅವರ ಬದ್ಧವೈರಿ ಎಂದು ಪರಿಗಣಿಸಲ್ಪಡುವ ಸಿದ್ದರಾಮಯ್ಯನವರೆಡೆ (Siddaramaiah) ಪ್ರೀತಿ-ಅಭಿಮಾನ ಹುಟ್ಟಿಬಿಟ್ಟಿದೆ. ಪಂಚರತ್ನ ಯಾತ್ರೆ ಭಾಗವಾಗಿ ಇಂದು ತುಮಕೂರಿನಲ್ಲಿದ್ದ ಎಚ್ಡಿಕೆ, ಸಿದ್ದರಾಮಯ್ಯನವರ ಕ್ಷೇತ್ರ ಹುಡುಕಾಟದ ಬಗ್ಗೆ ಲಘುವಾಗಿ (lightly) ಮಾತಾಡುವುದಿಲ್ಲ ಎಂದು ಹೇಳಿ ಮಾಧ್ಯಮದವರನ್ನು ಚಕಿತಗೊಳಿಸಿದರು. ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ, ಮಾಜಿ ಉಪ ಮುಖ್ಯಮಂತ್ರಿ ಆಗಿದ್ದು ತಮ್ಮದೇ ಆದ ವರ್ಚಸನ್ನು ಹೊಂದಿದ್ದಾರೆ, ಹಾಗಾಗಿ ಅವರ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Dec 02, 2022 01:57 PM