ಕೇಂದ್ರವನ್ನು ಟೀಕಿಸಿದ್ದ ಕಾಂಗ್ರೆಸ್ ಈಗ ಬೆಲೆ ಏರಿಕೆ ಮಾಡಿದ್ಯಾಕೆ? ಹೆಚ್ಡಿ ಕುಮಾರಸ್ವಾಮಿ ಪ್ರಶ್ನೆ
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ತೈಲ ಬೆಲೆ ಏರಿಕೆಯಿಂದ ಟ್ರಾನ್ಸ್ಪೋರ್ಟ್ಗೆ ಹೊಡೆತ ಬೀಳುತ್ತೆ. ಬಡವರು, ರೈತರಿಗೆ ತೊಂದರೆ ಆಗುತ್ತದೆ. ಎಷ್ಟು ದಿನ ಈ ಆಟ ಆಡುತ್ತಾರೋ ಎಂದು ಕಿಡಿಕಾರಿದ್ದಾರೆ.
ಮಂಡ್ಯ, ಜೂನ್ 15: ರಾಜ್ಯ ಕಾಂಗ್ರೆಸ್ ಸರ್ಕಾರ ಮದ್ಯದ ದರ ಏರಿಕೆ ಮಾಡಿದ್ದಾಯ್ತು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಾಳ ಮಾಡಿದ್ದಾಯ್ತು, 5 ಗ್ಯಾರಂಟಿ ಯೋಜನೆಗಾಗಿ ತೈಲ ದರ ಹೆಚ್ಚಳ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆಯಿಂದ ಟ್ರಾನ್ಸ್ಪೋರ್ಟ್ಗೆ ಹೊಡೆತ ಬೀಳುತ್ತೆ. ಬಡವರು, ರೈತರಿಗೆ ತೊಂದರೆ ಆಗುತ್ತದೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಹಣ ದೋಚಿದ್ದಾರೋ? ಎಷ್ಟು ದಿನ ಈ ಆಟ ಆಡುತ್ತಾರೋ. ಈ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ರೈತರಿಗೆ ತೊಂದರೆ ಆಗುತ್ತೆ. ಬಡವರ ಕಿಸೆಗೆ ಕೈ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jun 15, 2024 10:52 PM