ಮೈಸೂರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದ ಕುಮಾರಸ್ವಾಮಿ

|

Updated on: May 22, 2024 | 5:08 PM

ಶಿಲ್ಪಾ ಹೆಸರಿನ ರೈತ ಮಹಿಳೆ ಅಪಾರ ಹಾನಿ ಅನುಭವಿಸಿದ್ದು, ಅವರಿಗೆ ಮಾಜಿ ಮುಖ್ಯಮಂತ್ರಿಯವರು ಸ್ಥಳದಲ್ಲೇ ₹ 50,000 ಧನ ಸಹಾಯ ಮಾಡಿದರು. ಶಿಲ್ಪಾ, ಕುಮಾರಸ್ವಾಮಿಯವರ ಪಾದ ಮುಟ್ಟಿ ಕೃತಜ್ಞತೆ ಸಲ್ಲಿಸಿದರು. ನಂತರ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಕೇವಲ ಫೋಟೋ ಸಲುವಾಗಿ ಕುಮಾರಸ್ವಾಮಿಯ ಪಾದ ಹಿಡಿದುಕೊಳ್ಳುತ್ತಾನೆ. ಫೋಟೋ ಕ್ಲಿಕ್ ಆದ ನಂತರವೇ ಪಾದ ಬಿಡುತ್ತಾನೆ!

ಮೈಸೂರು: ಇಂದು ಮೈಸೂರು ಜಿಲ್ಲೆ ಪ್ರವಾಸದಲ್ಲಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ (Untimely rains) ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು. ಪಿರಿಯಾಪಟ್ಟಣದ (Piriyapatna) ಗೋರಹಳ್ಳಿಯ ಕಾಲುರಸ್ತೆಯಲ್ಲಿ ಕುಮಾರಸ್ವಾಮಿ, ಜಿಟಿ ದೇವೇಗೌಡ ಮತ್ತು ಪಕ್ಷದ ಸ್ಥಳೀಯ ಮುಖಂಡರು ನಡೆದುಬರುತ್ತಿರುವುದನ್ನು ದೃಶ್ಯಗಳಲ್ಲಿ ಕಾಣುತ್ತದೆ. ಮಳೆಯಿಂದಾಗಿ ಇಲ್ಲಿನ ಸೇತುವೆ ಕುಸಿದಿರುವ ಹಾಗಿದೆ. ನಮ್ಮ ಮೈಸೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಗೋರಹಳ್ಳಿಯಲ್ಲಿ ತಂಬಾಕು ಬೆಳೆ ಹಾಳಾಗಿದ್ದು ಬೆಳೆಗಾರರು ತಮ್ಮ ತೊಂದರೆಯನ್ನು ಕುಮಾರಸ್ವಾಮಿ ಮುಂದೆ ಹೇಳಿಕೊಂಡಿದ್ದಾರೆ. ಶಿಲ್ಪಾ ಹೆಸರಿನ ರೈತ ಮಹಿಳೆ ಅಪಾರ ಹಾನಿ ಅನುಭವಿಸಿದ್ದು, ಅವರಿಗೆ ಮಾಜಿ ಮುಖ್ಯಮಂತ್ರಿಯವರು ಸ್ಥಳದಲ್ಲೇ ₹ 50,000 ಧನ ಸಹಾಯ ಮಾಡಿದರು. ಶಿಲ್ಪಾ, ಕುಮಾರಸ್ವಾಮಿಯವರ ಪಾದ ಮುಟ್ಟಿ ಕೃತಜ್ಞತೆ ಸಲ್ಲಿಸಿದರು. ನಂತರ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಕೇವಲ ಫೋಟೋ ಸಲುವಾಗಿ ಕುಮಾರಸ್ವಾಮಿಯ ಪಾದ ಹಿಡಿದುಕೊಳ್ಳುತ್ತಾನೆ. ಫೋಟೋ ಕ್ಲಿಕ್ ಆದ ನಂತರವೇ ಪಾದ ಬಿಡುತ್ತಾನೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ನನ್ನ ತಾಯಿಯ ಕೈತುತ್ತು ತಿಂದು ಬೆಳೆದಿದ್ದು ಅಂತ ಹೇಳುವ ಅಗತ್ಯ ಕುಮಾರಸ್ವಾಮಿಗಿತ್ತೇ?

Follow us on