ಕುಮಾರಸ್ವಾಮಿ ರಾಮನಗರಕ್ಕೆ ಕೈಗಾರಿಕೆಗಳನ್ನು ತಂದು ನಿರುದ್ಯೋಗ ಸಮಸ್ಯೆ ನೀಗಿಸಲಿದ್ದಾರೆ: ನಿಖಿಲ್

ಕುಮಾರಸ್ವಾಮಿ ರಾಮನಗರಕ್ಕೆ ಕೈಗಾರಿಕೆಗಳನ್ನು ತಂದು ನಿರುದ್ಯೋಗ ಸಮಸ್ಯೆ ನೀಗಿಸಲಿದ್ದಾರೆ: ನಿಖಿಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 11, 2024 | 6:07 PM

ನಿಖಿಲ್ ಕುಮಾರಸ್ವಾಮಿ ನಂತರ ಅವರ ಧರ್ಮಪತ್ನಿ ರೇವತಿ ನಿಖಿಲ್ ಭಾಷಣ ಮಾಡಲು ಬರುತ್ತಾರೆ. ವೇದಿಕೆ ಹತ್ತಿ ಬರುವ ರೇವತಿ ಪೋಡಿಯಂ ಬಳಿ ಹೋಗುವ ಮೊದಲು ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರ ಪಾದಗಳಿಗೆ ನಮಸ್ಕರಿಸುತ್ತಾರೆ. ನಂತರ ನಿಖಿಲ್ ಜನರತ್ತ ತಿರುಗಿ ವೇದಿಕೆ ಮೇಲೆಯೇ ಸಾಷ್ಟಾಂಗವೆರಗುತ್ತಾರೆ.

ರಾಮನಗರ: ಚನ್ನಪಟ್ಟಣದಲ್ಲಿ ಆಯೋಜಿಸಿದ ಬೃಹತ್ ಜೆಡಿಎಸ್ ಸಮಾವೇಶದಲ್ಲಿ ಭಾಷಣ ಮಾಡಿದ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅತ್ಯಂತ ಭಾವುಕತೆಯಿಂದ ಮತ ಯಾಚಿಸಿದರು. ರಾಜ್ಯದ ಏಳೂವರೆ ಕೋಟಿ ಕನ್ನಡಿಗರು ಆಶೀರ್ವಾದ ಮಾಡಿ ಕುಮಾರಸ್ವಾಮಿಯವರಿಗೆ ಜೀವ ತುಂಬಿದ್ದಾರೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರೀ ಕೈಗಾರಿಕೆಗಳ ಮಂತ್ರಿ ಮಾಡಿ ಆಶೀರ್ವದಿಸಿದ್ದಾರೆ, ರಾಮನಗರ ಜಿಲ್ಲೆಯಲ್ಲಿ ಅನೇಕ ವಿದ್ಯಾವಂತರಿದ್ದಾರೆ ಆದರೆ ನಿರುದ್ಯೋಗ ತಾಂಡವಾಡುತ್ತಿದೆ, ಕುಮಾರಸ್ವಾಮಿಯವರು ಈ ಭಾಗದಲ್ಲಿ ಉದ್ದಿಮೆಗಳನ್ನು ತಂದು ನಿರುದ್ಯೋಗ ಹೋಗಲಾಡಿಸುತ್ತಾರೆ ಎಂದು ನಿಖಿಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡ

ಇದನ್ನೂ ಓದಿ:   ಬಹಿರಂಗ ಪ್ರಚಾರಕ್ಕೆ ಇಂದು ಕೊನೆ, ಚನ್ನಪಟ್ಟಣದಲ್ಲಿ ಪತಿಯ ಪರ ಮತ ಯಾಚಿಸುತ್ತಿರುವ ರೇವತಿ ನಿಖಿಲ್