Assembly Polls: ಹಾಸನ ಕ್ಷೇತ್ರದ ಟಿಕೆಟ್ ಗಾಗಿ ಹೆಚ್ ಡಿ ಕುಮಾರಸ್ವಾಮಿ ಮೇಲೆ  ಹೆಚ್ ಡಿ ರೇವಣ್ಣ ಮತ್ತು ಭವಾನಿಯಿಂದ ಎಡೆಬಿಡದ ಒತ್ತಡ  

TV9 Digital Desk

| Edited By: Arun Kumar Belly

Updated on: Feb 24, 2023 | 12:35 PM

ಟಿಕೆಟ್ ಯಾರಿಗೆ ಅಂತ ಹೈಕಮಾಂಡ್ ನಿಂದ ಘೋಷಣೆಯಾಗುವ ಮೊದಲೇ ಭವಾನಿಯವರು ತಾನೇ ಅಭ್ಯರ್ಥಿ ಅಂತ ನಿನ್ನೆಯಿಂದ ಮತಬೇಟೆ ಶುರುಮಾಡಿ ಗುಡಿಗುಂಡಾರ ಸುತ್ತುತ್ತಿದ್ದಾರೆ.

ಹಾಸನ: ಹಾಸನ ಮತಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ರಂಗೇರಿದೆ ಮಾರಾಯ್ರೇ. ಈ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ (HD Revanna) ಒಂದೋ ನಾನು ಸ್ಪರ್ಧಿಸುತ್ತೇನೆ ಇಲ್ಲವೇ ನನ್ನ ಪತ್ನಿ ಭವಾನಿಗೆ (Bhavani) ಟಿಕೆಟ್ ಕೊಡಿ ಅಂತ ಹಟಕ್ಕೆ ಬಿದ್ದಿದ್ದಾರೆ. ತಮ್ಮ ಕುಟುಂಬದಿಂದ ಈಗಾಗಲೇ ಸಾಕಷ್ಟು ಜನ ಸಕ್ರಿಯ ರಾಜಕಾರಣಲ್ಲಿರುವದರಿಂದ ಪಕ್ಷದ ವರಿಷ್ಠ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ಮತ್ತೊಬ್ಬರನ್ನು (ಭವಾನಿ) ರಾಜ್ಯ ರಾಜಕೀಯಕ್ಕೆ ತರುವುದು ಇಷ್ಟವಿಲ್ಲ. ಆದರೆ ರೇವಣ್ಣ, ಭವಾನಿ ಮತ್ತು ಅವರ ಮಕ್ಕಳು ಪಟ್ಟು ಹಿಡಿದುಬಿಟ್ಟಿದ್ದಾರೆ. ಟಿಕೆಟ್ ಯಾರಿಗೆ ಅಂತ ಹೈಕಮಾಂಡ್ ನಿಂದ ಘೋಷಣೆಯಾಗುವ ಮೊದಲೇ ಭವಾನಿಯವರು ತಾನೇ ಅಭ್ಯರ್ಥಿ ಅಂತ ನಿನ್ನೆಯಿಂದ ಮತಬೇಟೆ ಶುರುಮಾಡಿ ಗುಡಿಗುಂಡಾರ ಸುತ್ತುತ್ತಿದ್ದಾರೆ. ಪತಿ-ಪತ್ನಿಯರಿಬ್ಬರೂ ಹಲವಾರು ತಂತ್ರಗಾರಿಕೆಗಳ ಮೂಲಕ ಕುಮಾರಸ್ವಾಮಿ ಮೇಲೆ ಒತ್ತಡ ಹೇರುತ್ತಿರುವುದು ನಿಜ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada