ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೆಚ್ಡಿ ರೇವಣ್ಣ ಭೇಟಿ
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೆಚ್ಡಿ ರೇವಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಜ್ಯದ ಜನತೆಗೆ ದೇವರು ಒಳ್ಳೆದು ಮಾಡಲಿ. ರಾಜ್ಯದಲ್ಲಿ ಮಳೆ ಬೆಳೆ ಆಗಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಬೆಂಗಳೂರು, ಜ.15: ಸಂಕ್ರಾಂತಿ ಹಬ್ಬ ಹಿನ್ನೆಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna), ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗಂಗಾಧರನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಜ್ಯದ ಜನತೆಗೆ ದೇವರು ಒಳ್ಳೆದು ಮಾಡಲಿ. ರಾಜ್ಯದಲ್ಲಿ ಮಳೆ ಬೆಳೆ ಆಗಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. 2 ವರ್ಷದ ಹಿಂದೆ ಬಂದಂತಹ ಕೋವಿಡ್ ರೀತಿಯಲ್ಲಿ ಯಾವುದೇ ಕಾಯಿಲೆ ಮತ್ತೆ ಬರಬಾರದು ಅಂತ ಕೇಳಿಕೊಂಡಿದ್ದೇನೆ. ರಾಜ್ಯದ ಜನತೆ, ರೈತರಿಗೆ ದೇವರು ಒಳ್ಳೆದು ಮಾಡುತ್ತಾನೆ. ರಾಜಕೀಯದಲ್ಲಿ ಏನಾಗುತ್ತೆ ಅನ್ನೋದನ್ನ ಗವಿಗಂಗಾಧರೇಶ್ವರ ನೋಡಿಕೊಳ್ಳುತ್ತಾನೆ ಎಂದರು.
ಗಂಗಾಧರನ ದರ್ಶನಕ್ಕೆ ಸಂಜೆ ತನಕ ನಿರ್ಬಂಧ
ಇನ್ನು ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ತೆರೆ ಬಿದ್ದಿದ್ದು, ಕೌತುಕದ ಸಮಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಗರ್ಭಗುಡಿಯ ಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಹಿನ್ನೆಲೆ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಂಜೆ 5.20ರಿಂದ 5.23ರವರೆಗೆ ಮೂರು ನಿಮಿಷಗಳ ಕಾಲ ಸೂರ್ಯ ರಶ್ಮಿ ಶಿವಲಿಂಗಕ್ಕೆ ಸ್ಪರ್ಶಿಸಲಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ