ಕೋಲಾರದಲ್ಲಿ ಭಾರೀ ಮಳೆ, ಕಂಗಾಲಾಗಿದ್ದ ರೈತರಲ್ಲಿ ಅಪರಿಮಿತ ಸಂತಸ, ಬೆಂಗಳೂರಲ್ಲೂ ಜಿನುಗು ಮಳೆ!

ಕೋಲಾರದಲ್ಲಿ ಭಾರೀ ಮಳೆ, ಕಂಗಾಲಾಗಿದ್ದ ರೈತರಲ್ಲಿ ಅಪರಿಮಿತ ಸಂತಸ, ಬೆಂಗಳೂರಲ್ಲೂ ಜಿನುಗು ಮಳೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 25, 2023 | 5:31 PM

ಇಂದು ಮಧ್ಯಾಹ್ನದಿಂದ ಬೆಂಗಳೂರು ನಗರದಲ್ಲಿ ಮೊದಲು ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಜಿನುಗು ಮಳೆ ಶುರುವಾದಾಗ ನಗರದ ನಿವಾಸಿಗಳು ಸುತ್ತಮತ್ತಲಿನ ಯಾವುದೋ ಪ್ರದೇಶದಲ್ಲಿ ಮಳೆಯಾಗುತ್ತಿರಬಹುದು ಅಂದುಕೊಂಡಿದ್ದು ಸುಳ್ಳಲ್ಲ. ಕೋಲಾರದಿಂದ ವರದಿ ಬಂದಾಗ ಅನುಮಾನ ನಿಜವಾಯಿತು.

ಕೋಲಾರ: ಚಿನ್ನದ ನಾಡು ಅಂತ ಕರೆಸಿಕೊಳ್ಳುವ ಕೋಲಾರದಲ್ಲಿ (Kolar) ಭರ್ಜರಿ ಮಳೆಯಾಗಿದೆ, ಈಗಲೂ ಸುರಿಯುತ್ತಿದೆ ಅಂತ ಅಲ್ಲಿನ ಟಿವಿ9 ಕನ್ನಡ ವಾಹಿನಿ ವರದಿಗಾರ ಹೇಳಿದ್ದಾರೆ. ಇಂದು ಮಧ್ಯಾಹ್ನದಿಂದ ಬೆಂಗಳೂರು ನಗರದಲ್ಲಿ (Bengaluru City) ಮೊದಲು ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಜಿನುಗು ಮಳೆ (drizzling) ಶುರುವಾದಾಗ ನಗರದ ನಿವಾಸಿಗಳು ಸುತ್ತಮತ್ತಲಿನ ಯಾವುದೋ ಪ್ರದೇಶದಲ್ಲಿ ಮಳೆಯಾಗುತ್ತಿರಬಹುದು ಅಂದುಕೊಂಡಿದ್ದು ಸುಳ್ಳಲ್ಲ. ಕೋಲಾರದಿಂದ ವರದಿ ಬಂದಾಗ ಅನುಮಾನ ನಿಜವಾಯಿತು. ಮಳೆಯ ತೀವ್ರ ಕೊರತೆಯಿಂದಾಗಿ ರಾಜ್ಯ ಭಾರೀ ಸ್ವರೂಪದ ಬರಕ್ಕೆ ಸಿಲುಕಿ ನಲುಗಿತ್ತಿರುವುದಿಂದ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾದರೂ ಉಳಿದ ಭಾಗದ ಜನರಿಗೆ ತಮ್ಮ ಭಾಗದಲ್ಲೇ ಮಳೆ ಸುರಿಯುತ್ತಿರುವಷ್ಟು ಖುಷಿಯಾಗುತ್ತದೆ. ಕೋಲಾರ ಟೊಮೆಟೊ ಮತ್ತು ಇತರ ತರಕಾರಿಗಳನನ್ನು ಹೇರಳವಾಗಿ ಬೆಳೆಯುವ ಪ್ರದೇಶ. ಹಾಗಾಗೇ, ಇವತ್ತು ಮಳೆ ಸುರಿಯುತ್ತಿರುವುದು ಅಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 25, 2023 05:28 PM