ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಬೆಂಗಳೂರಿನಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ವರುಣನಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳು ಒಂದೆರಡಲ್ಲ. ಇದೀಗ ಇಂದಿರಾನಗರ 17ನೇ ಕ್ರಾಸ್ನಲ್ಲಿರುವ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಎಸಿಪಿ ಆಗಿರುವ ವೇಣುಗೋಪಾಲ್ ಮನೆಗೂ ಮಳೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಆಗಿವೆ.
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ (rain) ಆರ್ಭಟಕ್ಕೆ ನಿಜಕ್ಕೂ ಬೆಂಗಳೂರು ತತ್ತರಿಸಿದೆ. ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಇತ್ತ ಇಂದಿರಾನಗರ 17ನೇ ಕ್ರಾಸ್ನಲ್ಲಿರುವ ಕರ್ನಾಟಕ ಪೊಲೀಸ್ ಅಧಿಕಾರಿ ವೇಣುಗೋಪಾಲ್ ಮನೆಗೂ ನೀರು ನುಗ್ಗಿದೆ. ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಎಸಿಪಿ ಆಗಿದ್ದಾರೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮನೆಗೆ ಸುಮಾರು ಎರಡ್ಮೂರು ಅಡಿಯಷ್ಟು ನೀರು ನುಗ್ಗಿದೆ. ಪರಿಣಾಮ ಮನೆಯೊಳಗಿರುವ ವಸ್ತುಗಳೆಲ್ಲಾ ನಷ್ಟವಾಗಿದೆ. ಇದೀಗ ನಿವಾಸಿಗಳು ನೀರು ತೆರವು ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.