ಬೆಳಗಾವಿಯಲ್ಲಿ ಭಾರಿ ಮಳೆ; ರಸ್ತೆ ಮೇಲೆ 2 ಅಡಿ ನೀರು.. ಸವಾರರ ಪರದಾಟ

ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 8:37 PM

ಬೆಳಗಾವಿ(Belagavi) ಜಿಲ್ಲೆಯಾದ್ಯಂತ ಇಂದು(ಜೂ.08) ಮಧ್ಯಾಹ್ನದಿಂದ ಧಾರಕಾರ ಮಳೆ(Rain) ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ನಗರದ ಗ್ಲೋಬ್ ಚಿತ್ರಮಂದಿರಕ್ಕೆ ಮಳೆಯ ನೀರು ನುಗ್ಗಿದ್ದು, ಇತ್ತ ಬೆಳಗಾವಿಯ ಖಾನಾಪುರ ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದೆ.

ಬೆಳಗಾವಿ, ಜೂ.08: ಬೆಳಗಾವಿ(Belagavi) ಜಿಲ್ಲೆಯಾದ್ಯಂತ ಇಂದು(ಜೂ.08) ಮಧ್ಯಾಹ್ನದಿಂದ ಧಾರಕಾರ ಮಳೆ(Rain) ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ನಗರದ ಗ್ಲೋಬ್ ಚಿತ್ರಮಂದಿರಕ್ಕೆ ಮಳೆಯ ನೀರು ನುಗ್ಗಿದ್ದು, ಇತ್ತ ಬೆಳಗಾವಿಯ ಖಾನಾಪುರ ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದೆ. ಪರಿಣಾಮ ಸಂಚಾರ ದಟ್ಟಣೆಯಿಂದ ಸವಾರರು ಪರದಾಟ ನಡೆಸಿದ್ದಾರೆ. ಜೊತೆಗೆ ಆನಂದ ನಗರದಲ್ಲಿ ಮೂವತ್ತಕ್ಕೂ ಅಧಿಕ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಈ ಹಿನ್ನಲೆ ಕಾಲೋನಿ ಜನ ಬೀದಿಗೆ ಬಂದಿದ್ದಾರೆ. ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಈವರೆಗೂ ಸ್ಥಳಕ್ಕೆ ಬಾರದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us