ಇಂದಿರಾನಗರದಲ್ಲಿ ವರುಣಾರ್ಭಟ; 17ನೇ ಡಿ ಕ್ರಾಸ್ ಸಂಪೂರ್ಣ ಜಲಾವೃತ

| Updated By: ಆಯೇಷಾ ಬಾನು

Updated on: Oct 16, 2024 | 10:40 AM

ಇಂದಿರಾನಗರದ 17ನೇ ಡಿ ಕ್ರಾಸ್ ಜಲಾವೃತಗೊಂಡು ದ್ವೀಪದಂತಾಗಿದೆ. ಮೋರಿಯಿಂದ ಕೊಚ್ಚೆ ನೀರು ಆಚೆ ಹರಿದು ಬರುತ್ತಿದೆ. ಇದರಿಂದ ನಾಲ್ಕೂ ದಿಕ್ಕಲ್ಲೂ ನೀರು ಆವರಿಸಿಕೊಂಡಿದೆ. 17ನೇ ಡಿ ಕ್ರಾಸ್ ನಿವಾಸಿಗಳು ಸ್ಥಳದಲ್ಲೇ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು, ಅ.16: ನಗರದ ಪ್ರತಿಷ್ಟಿತ ಏರಿಯಾದಲ್ಲಿ ವರುಣಾರ್ಭಟ ಜೋರಾಗಿದೆ. ಇಂದಿರಾನಗರದ 17ನೇ ಡಿ ಕ್ರಾಸ್ ಜಲಾವೃತಗೊಂಡು ದ್ವೀಪದಂತಾಗಿದೆ. ಮೋರಿಯಿಂದ ಕೊಚ್ಚೆ ನೀರು ಆಚೆ ಹರಿದು ಬರುತ್ತಿದೆ. ಇದರಿಂದ ನಾಲ್ಕೂ ದಿಕ್ಕಲ್ಲೂ ನೀರು ಆವರಿಸಿಕೊಂಡಿದೆ. ರಸ್ತೆ ಸಂಪೂರ್ಣ ಜಲಾವೃತ, ಮನೆಗಳಿಗೂ ನೀರು ನುಗ್ಗಿದೆ. ರಾತ್ರಿ ಇಡೀ ಮಳೆ ಬಂದಿದ್ದು ನೀರು ತೆರವು ಮಾಡಲು ಸ್ಥಳೀಯರು ಜಾಗರಣೆ ಮಾಡಿದ್ದಾರೆ.

ಬೆಳ್ಳಂಬೆಳಗ್ಗೆ ರಸ್ತೆಗೆ ಬಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. 17ನೇ ಡಿ ಕ್ರಾಸ್ ನಿವಾಸಿಗಳು ಸ್ಥಳದಲ್ಲೇ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 15 ವರ್ಷದಿಂದ ಇದರ ಬಗ್ಗೆ ದೂರು ಕೊಟ್ಟರೂ ಏನು ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ