ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ

Updated on: Jun 16, 2025 | 7:58 PM

ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವ ಕಳೆಬಂದಿದೆ. ಮುಂಗಾರು ಆರಂಭಕ್ಕೂ ಮುನ್ನ ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿ ಧುಮ್ಮುಕ್ಕುತ್ತಿದ್ದು, ಪ್ರವಾಸಿಗರನ್ನು ಮತ್ತೆ ಕೈಬಿಸಿ ಕರೆಯುತ್ತಿದೆ. ಪ್ರಕೃತಿಯ ತಾಣದ ಸೊಬಗನ್ನು ಸವಿಯಲು ಸಹಸ್ರಾರು ಜನ ಬರುತ್ತಿದ್ದು, ಜೋಗದ ಗತವೈಭವಕ್ಕೆ ಮತ್ತೆ ಮೆರಗು ಬಂದಿದೆ.

ಶಿವಮೊಗ್ಗ, (ಜೂನ್ 16): ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವ ಕಳೆಬಂದಿದೆ. ಮುಂಗಾರು ಆರಂಭಕ್ಕೂ ಮುನ್ನ ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿ ಧುಮ್ಮುಕ್ಕುತ್ತಿದ್ದು, ಪ್ರವಾಸಿಗರನ್ನು ಮತ್ತೆ ಕೈಬಿಸಿ ಕರೆಯುತ್ತಿದೆ. ಪ್ರಕೃತಿಯ ತಾಣದ ಸೊಬಗನ್ನು ಸವಿಯಲು ಸಹಸ್ರಾರು ಜನ ಬರುತ್ತಿದ್ದು, ಜೋಗದ ಗತವೈಭವಕ್ಕೆ ಮತ್ತೆ ಮೆರಗು ಬಂದಿದೆ. ಹೀಗಾಗಿ ಜೋಗ ಜಲಪಾತದಲ್ಲಿ ನಯನ ಮನೋಹರ ದೃಶ್ಯ ಕಾವ್ಯ ನಿರ್ಮಾಣವಾಗಿದ್ದು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು.