ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆ, ಕಾಫಿ ಬೆಳೆಗಾರರಲ್ಲಿ ಹರ್ಷೋಲ್ಲಾಸ

ಸ್ಥಳೀಯರು ನೀಡಿರುವ ಮಾಹಿತಿ ನಂಬುವುದಾದರೆ ಧಾರಾಕಾರವಾಗಿ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಬೇತ್ರಿ, ಕದನೂರು, ಬಿಟ್ಟಂಗಾಲ, ಮೇಕೇರಿ, ಕಗ್ಗೋಡು ಮೊದಲಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಈ ಭಾಗಗಳಲ್ಲೇ ಅತಿಹೆಚ್ಚು ಕಾಫಿ ಪ್ಲಾಂಟೇಶನ್ ಮತ್ತು ಕಾಫಿ ಬೆಳೆಗಾರರು ಇರೋದು. ಇಂದು ಸುರಿದ ಮಳೆ ಅವರಲ್ಲಿ ಸಂತಸ ತಂದಿದೆ.

ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಧಾರಾಕಾರ ಮಳೆ, ಕಾಫಿ ಬೆಳೆಗಾರರಲ್ಲಿ ಹರ್ಷೋಲ್ಲಾಸ
|

Updated on: Apr 22, 2024 | 6:21 PM

ಮಡಿಕೇರಿ: ರಾಜ್ಯದಲ್ಲಿ ಒಂದು ವಾರದಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿರುವುದನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ಬೇಸಿಗೆಯ ಧಗೆಯಿಂದ (soaring temperature) ಕಂಗೆಟ್ಟಿರುವ ಜನ ಮಳೆಗಾಲ (rainy season) ಶುರುವಾಗೇ ಬಿಟ್ಟಿತಾ ಅಂತ ಕ್ಷಣಿಕ ಸಂತಸ ಮತ್ತು ರೋಮಾಂಚನಕ್ಕೊಳಗಾದದ್ದೂ ಇದೆ. ಕ್ಷಣಿಕ ಸಂತಸ ಯಾಕೆಂದರೆ ಹಲವಾರು ಭಾಗಳಳಲ್ಲಿ ಮಳೆಯಾಗುತ್ತಿರುವುದು ನಿಜವಾದರೂ, ಎಲ್ಲೂ ಬಿರುಸಿನ ಅಥವಾ ನೀರು ಜೋರಾಗಿ ಹರಿಯುವಂಥ ಮಳೆಯಾಗಿಲ್ಲ. ಇಲ್ನೋಡಿ, ಇವತ್ತು ಕೊಡಗು ಜಿಲ್ಲೆಯಲ್ಲಿ (Kodagu district) ಮಳೆಯಾಗುತ್ತಿದೆ. ಜಿಲ್ಲೆಯ ವಿರಾಜಪೇಟ ತಾಲ್ಲೂಕಿನಲ್ಲಿ ಜೋರು ಮಳೆಯಾಗಿದೆ. ಸ್ಥಳೀಯರು ನೀಡಿರುವ ಮಾಹಿತಿ ನಂಬುವುದಾದರೆ ಧಾರಾಕಾರವಾಗಿ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಬೇತ್ರಿ, ಕದನೂರು, ಬಿಟ್ಟಂಗಾಲ, ಮೇಕೇರಿ, ಕಗ್ಗೋಡು ಮೊದಲಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಈ ಭಾಗಗಳಲ್ಲೇ ಅತಿಹೆಚ್ಚು ಕಾಫಿ ಪ್ಲಾಂಟೇಶನ್ ಮತ್ತು ಕಾಫಿ ಬೆಳೆಗಾರರು ಇರೋದು. ಇಂದು ಸುರಿದ ಮಳೆ ಅವರಲ್ಲಿ ಸಂತಸ ತಂದಿದೆ. ಮಲೆನಾಡು ಪ್ರದೇಶಗಳಲ್ಲೂ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಬೇಸಿಗೆಯ ಈ ಮಳೆ ಜನರಲ್ಲಿ ಹರ್ಷೋಲ್ಲಾಸ ಮೂಡಿಸಿದ್ದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ಹೊರ ವಲಯದಲ್ಲೊಂದು ವಿಶೇಷ ಜಾತ್ರೆ; ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ಪ್ರಾರ್ಥನೆ

Follow us