Video: ಕಾರ ಹುಣ್ಣಿಮೆಯ ದಿನವೇ ಸುರಿದ ಮಳೆ: ಅನ್ನದಾತರಲ್ಲಿ ಸಂತಸ

Video: ಕಾರ ಹುಣ್ಣಿಮೆಯ ದಿನವೇ ಸುರಿದ ಮಳೆ: ಅನ್ನದಾತರಲ್ಲಿ ಸಂತಸ

ಗಂಗಾಧರ​ ಬ. ಸಾಬೋಜಿ
|

Updated on:Jun 04, 2023 | 7:26 PM

ಕಾರ ಹುಣ್ಣಿಮೆಯ ದಿನ ಮಳೆ ಸುರಿದಿದ್ದರಿಂದ ಅನ್ನದಾತರಲ್ಲಿ ಸಂತಸ ಮೂಡಿದೆ. ಹೊನ್ನುಗ್ಗಿ ಮರುದಿನವೇ ಸುರಿದ ಮಳೆಯಿಂದ ರೈತರ ಮೊಗದಲ್ಲಿ‌ ಮಂದಹಾಸ ಅರಳಿದೆ.

ವಿಜಯಪುರ: ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಕಾಲ ಭಾರಿ ಮಳೆ (rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಹಾಗಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದಿದ್ದು, ಬಿಸಿಲ‌ ಬೇಗೆಗೆ ತಂಪೆರೆದಿದೆ. ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ವರುಣ ಸಿಂಚನವಾಗಿದೆ. ಅದರಲ್ಲಿಯೂ ಕಾರ ಹುಣ್ಣಿಮೆಯ ದಿನ ಮಳೆ ಸುರಿದಿದ್ದರಿಂದ ಅನ್ನದಾತರಲ್ಲಿ ಸಂತಸ ಮೂಡಿದೆ. ಹೊನ್ನುಗ್ಗಿ ಮರುದಿನವೇ ಸುರಿದ ಮಳೆಯಿಂದ ರೈತರ ಮೊಗದಲ್ಲಿ‌ ಮಂದಹಾಸ ಅರಳಿದೆ. ಮುಂಗಾರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುವಲ್ಲಿ ಈ ಮಳೆ ಪೂರಕವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jun 04, 2023 07:26 PM