ನಾಯಿಯನ್ನು ಹೊತೊಯ್ದಿದ್ದ ಮನೆಗೆ ಮತ್ತೆ ಬಂದ ಚಿರತೆ: ರಾಜ ಗಾಂಭೀರ್ಯ ನಡಿಗೆ ಸಿಸಿ ಟಿವಿಯಲ್ಲಿ ಸೆರೆ

ನಾಯಿಯನ್ನು ಹೊತೊಯ್ದಿದ್ದ ಮನೆಗೆ ಮತ್ತೆ ಬಂದ ಚಿರತೆ: ರಾಜ ಗಾಂಭೀರ್ಯ ನಡಿಗೆ ಸಿಸಿ ಟಿವಿಯಲ್ಲಿ ಸೆರೆ

ರಮೇಶ್ ಬಿ. ಜವಳಗೇರಾ
|

Updated on: Jun 04, 2023 | 5:38 PM

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಂಪಗೋಡ ಗ್ರಾಮದ ಬೊಮ್ಮಜನಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಉತ್ತರ ಕನ್ನಡ:  ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಂಪಗೋಡ ಗ್ರಾಮದ ಬೊಮ್ಮಜನಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಐದಾರು ದಿನಗಳಿಂದ ಬೊಮ್ಮಜನಿಯ ಎಂ.ಆರ್. ಹೆಗಡೆ ಅವರ ಮನೆಯ ಸುತ್ತಮುತ್ತ ನಿತ್ಯ ಚಿರತೆ ಬಂದು ಹೋಗುತ್ತಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಮನೆಯ ಒಂದು ನಾಯಿ ಹಾಗೂ ಎರಡು ಮರಿಗಳನ್ನು ತೆಗೆದುಕೊಂಡು ಹೋಗಿದ್ದು ಸಹ ಸಿಸಿ ಕ್ಯಾಮರದಾಲ್ಲಿ ಸೆರೆಯಾಗಿತ್ತು. ಈಗ ಪುನಃ ಮನೆಯ ಹತ್ತಿರ ಚಿರತೆ ಬರುತ್ತಿರುವುದರಿಂದ ಸುತ್ತಮುತ್ತಲಿನ ಜನತೆ ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.