Tumakuru: ಕೀಲು ಮೂಳೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರನೇ ಡಾಕ್ಟರ್; ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿಡಿಯೋ ವೈರಲ್
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲುಮೂಳೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರನೇ ಡಾಕ್ಟರ್ ಆಗಿದ್ದಾರೆ. ಹೌದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಡಿ ಗ್ರೂಪ್ ನೌಕರ ಮದಕರಿ ನಾಯಕ ಎಂಬಾತನೇ ಚಿಕಿತ್ಸೆ ನೀಡುತ್ತಿದ್ದಾನೆ.
ತುಮಕೂರು: ಪಾವಗಡ(Pavagada) ಸರ್ಕಾರಿ ಆಸ್ಪತ್ರೆಯಲ್ಲಿ ಕೀಲುಮೂಳೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರನೇ ಡಾಕ್ಟರ್ ಆಗಿದ್ದಾರೆ. ಹೌದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಡಿ ಗ್ರೂಪ್ ನೌಕರ ಮದಕರಿ ನಾಯಕ ಎಂಬಾತನೇ ಚಿಕಿತ್ಸೆ ನೀಡುತ್ತಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡುವ ರೋಗಿಗಳಿಗೆ ತಾನೇ ಡಾಕ್ಟರ್, ಟ್ರಿಟ್ಮೆಂಟ್ ತಗೊಳೋದಾದ್ರೆ ತಗೊಳ್ಳಿ. ಇಲ್ಲ ಅಂದ್ರೆ, ಹೋಗಿ ಎಂದು ಆವಾಜ್ ಹಾಕುತ್ತಿದ್ದಾನೆ. ಇನ್ನು ಆರ್ಥೋಪೆಡಿಕ್ ವೈದ್ಯರು ಧೀರ್ಘ ರಜೆಯಲ್ಲಿ ಇದ್ದಾರೆ. ಈ ಕಾರಣಕ್ಕೆ ತಾನೇ ಚಿಕಿತ್ಸೆ ನೀಡುತ್ತಿರುವ ಡಿ ಗ್ರೂಪ್ ನೌಕರನ ವೀಡಿಯೋ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 04, 2023 12:20 PM
Latest Videos