ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ…

Updated on: Apr 23, 2025 | 7:59 PM

ಪ್ರವಾಸಿಗರು ಮುಸ್ಲಿಮರು ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಂಡು ಸಾಯಿಸಿದ್ದಾರೆ. ಈ ಬಗ್ಗೆ ಉಗ್ರರು ದಾಳಿಯಿಂದ ಪಾರಾದವರು ಬಿಚ್ಚಿಟ್ಟಿದ್ದಾರೆ. ಉಗ್ರರು ಐಡಿ ಕಾರ್ಡ್‌ ಕೇಳಿ, ಪ್ರವಾಸಿಗರ ವಿವರ ಪಡೆದರು ಹಾಗೂ ಕೆಲವರ ಪ್ಯಾಂಟ್ ಬಿಚ್ಚಿಸಿ ಅವರ ಗುರುತು ಖಚಿತಪಡಿಸಿಕೊಂಡು ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಸ್ವರ್ಗದ ತಾಣವಾಗಿರುವ ಪಹಲ್ಗಾಮ್​ನ ಸ್ಥಿತಿ ಹೇಗಿದೆ ನೋಡಿ.

ಶ್ರೀನಗರ, (ಏಪ್ರಿಲ್ 23): ಜಮ್ಮು ಮತ್ತು ಕಾಶ್ಮೀರದ ನಂತ​ನಾಗ್ ಜಿಲ್ಲೆಯ ಪಹಲ್ಗಾಮ್‌​​ದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ನಿನ್ನೆ(ಏಪ್ರಿಲ್ 22) ಸಂಜೆ ಉಗ್ರರು ನಡೆಸಿದ ದಾಳಿಯಲ್ಲಿ 27ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹೆಸರು ಕೇಳಿ ಹಿಂದೂವಾಗಿದ್ದರೆ ಗುಂಡಿಕ್ಕಿ ಕೊಂದಿದ್ದಾರೆ. ಹೌದು.. ಪ್ರವಾಸಿಗರು ಮುಸ್ಲಿಮರು ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಂಡು ಸಾಯಿಸಿದ್ದಾರೆ. ಈ ಬಗ್ಗೆ ಉಗ್ರರು ದಾಳಿಯಿಂದ ಪಾರಾದವರು ಬಿಚ್ಚಿಟ್ಟಿದ್ದಾರೆ. ಉಗ್ರರು ಐಡಿ ಕಾರ್ಡ್‌ ಕೇಳಿ, ಪ್ರವಾಸಿಗರ ವಿವರ ಪಡೆದರು ಹಾಗೂ ಕೆಲವರ ಪ್ಯಾಂಟ್ ಬಿಚ್ಚಿಸಿ ಅವರ ಗುರುತು ಖಚಿತಪಡಿಸಿಕೊಂಡು ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇನ್ನು ಸ್ವರ್ಗದ ತಾಣವಾಗಿರುವ ಪಹಲ್ಗಾಮ್​ನ ಸ್ಥಿತಿ ಹೇಗಿದೆ ನೋಡಿ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More