ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಆಪ್ತ ವಾಗೀಶ್ ಕಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳು ಕಳೆದು ಹೋಗಿದ್ದವು. ಅನುಮಾನ ಬರದಿರಲು ಕಾರಣ ಏನು ಎಂದು ಗುರುಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.
ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳು ಕಳೆದು ಹೋಗಿದ್ದವು. ಅವರಿಗೆ ಅನೇಕರು ಕರೆ ಮಾಡಿದ್ದರು. ಆದರೆ, ಯಾರ ಕರೆಗೂ ಪ್ರತಿಕ್ರಿಯೆ ಬಂದಿರಲಿಲ್ಲ. ಅವರ ಸಾವಿನ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಗುರುಪ್ರಸಾದ್ ಆಪ್ತ ವಾಗೀಶ್ ಕಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಕ್ಟೋಬರ 31ಕ್ಕೆ ಎದ್ದೇಳು ಮಂಜುನಾಥ್ ಸೀಕ್ವೆಲ್ಸ್ನ ವಿಶುವಲ್ಸ್ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಗ್ರೂಪ್ ಅಲ್ಲಿ ಬರಲಿಲ್ಲ. ನಾವೆಲ್ಲ ಮೆಸೇಜ್ ಹಾಕಿದ್ದೆವು. ಆದರೆ, ರಿಪ್ಲೈ ಬರಲಿಲ್ಲ. ಜನ್ಮದಿನಕ್ಕೆ ವಿಶ್ ಮಾಡಿದರೂ ರಿಪ್ಲೈ ಬರಲಿಲ್ಲ. ಅವರು ಅಜ್ಞಾತವಾಸಕ್ಕೆ ಹೋಗಿರಬಹುದು ಎಂದುಕೊಂಡೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 04, 2024 10:40 PM
Latest Videos