‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರಾಗಿದ್ದೇಕೆ? ಕಾರಣ ನೀಡಿದ ನಟ

| Updated By: ರಾಜೇಶ್ ದುಗ್ಗುಮನೆ

Updated on: Oct 24, 2022 | 8:29 PM

ರಿಷಬ್ ಶೆಟ್ಟಿಕೂಡ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಪುನೀತ ಪರ್ವ’ (Puneetha Parva) ಕಾರ್ಯಕ್ರಮಕ್ಕೆ ಅನೇಕ ಸ್ಟಾರ್ಸ್ ಹಾಜರಿ ಹಾಕಿದ್ದರು. ಅದೇ ರೀತಿ ಕೆಲವರು ಗೈರಾಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ರಿಷಬ್ ಶೆಟ್ಟಿ (Rishab Shetty) ಕೂಡ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಕನ್ನಡ ಸಂಘಟನೆಗಳು ವಿದೇಶದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಒಂದನ್ನು ಆರು ತಿಂಗಳ ಹಿಂದೆಯೇ ಒಪ್ಪಿಕೊಂಡಿದ್ದೆ. ಪುನೀತ ಪರ್ವ ಹಾಗೂ ಈ ಕಾರ್ಯಕ್ರಮ ಕ್ಲ್ಯಾಶ್ ಆಯಿತು. ನಾನು ಬರಲ್ಲ ಅಂದ್ರೂ ಅವರು ಕೇಳಲೇ ಇಲ್ಲ. ಹೀಗಾಗಿ ಹೋಗಲೇ ಬೇಕಾಯಿತು’ ಎಂದು ರಿಷಬ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.