Puneetha Parva: ಪುನೀತ ಪರ್ವಕ್ಕೆ ಚೆನ್ನೈನಿಂದ ಸೂರ್ಯ ಬಂದರೂ ಕನ್ನಡದ ಕೆಲವು ನಟರೇ ಬರಲಿಲ್ಲ; ನೆಟ್ಟಿಗರ ಟೀಕೆ

Gandhada Gudi: ಪುನೀತ್​ ರಾಜ್​ಕುಮಾರ್​ ಅವರಿಗೋಸ್ಕರ ಎಲ್ಲರೂ ಒಂದೆಡೆ ಸೇರಲು ಸಿಕ್ಕಿದ ಅಪರೂಪದ ಅವಕಾಶ ಇದಾಗಿತ್ತು. ಇಂಥ ಕಾರ್ಯಕ್ರಮಕ್ಕೆ ಬರಲಾಗದೇ ನೆಪ ಹೇಳಿರುವುದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ.

Puneetha Parva: ಪುನೀತ ಪರ್ವಕ್ಕೆ ಚೆನ್ನೈನಿಂದ ಸೂರ್ಯ ಬಂದರೂ ಕನ್ನಡದ ಕೆಲವು ನಟರೇ ಬರಲಿಲ್ಲ; ನೆಟ್ಟಿಗರ ಟೀಕೆ
ಪುನೀತ್​ ರಾಜ್​ಕುಮಾರ್
Follow us
| Updated By: ಮದನ್​ ಕುಮಾರ್​

Updated on:Oct 22, 2022 | 4:47 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಅಜಾತಶತ್ರು ಆಗಿದ್ದರು. ಚಿತ್ರರಂಗದ ಎಲ್ಲರ ಜೊತೆಗೂ ಅವರು ಉತ್ತಮ ಒಡನಾಟ ಹೊಂದಿದ್ದರು. ಅನೇಕ ಸಿನಿಮಾ ತಂಡಗಳಿಗೆ ಅವರು ಬೆನ್ನು ತಟ್ಟಿದ್ದರು. ಈಗ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ (Gandhada Gudi) ಬಿಡುಗಡೆಗೆ ಸಜ್ಜಾಗಿದೆ. ಅದರ ಸಲುವಾಗಿ ಅ.21ರಂದು ಪ್ರೀ-ರಿಲೀಸ್​ ಇವೆಂಟ್​ ಮಾಡಲಾಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಅಭಿಮಾನಿಗಳು ಹಾಗೂ ನೂರಾರು ಮಂದಿ ಸ್ಟಾರ್​ ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ‘ಪುನೀತ ಪರ್ವ’ (Puneetha Parva) ಹೆಸರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಕೆಲವು ಕಲಾವಿದರು ಗೈರಾಗಿದ್ದು ಬೇಸರದ ಸಂಗತಿ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ.

‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದಕ್ಕೆ ಕೆಲವು ನಟರು ಕುಂಟು ನೆಪಗಳನ್ನು ನೀಡಿದ್ದಾರೆ. ಈ ದಿನಾಂಕದಲ್ಲೇ ಕಾರ್ಯಕ್ರಮ ನಡೆಯಲಿದೆ ಎಂಬುದು ಮೊದಲೇ ಗೊತ್ತಾಗಿತ್ತು. ಆದರೂ ಕೂಡ ಕೆಲವರು ಸಮಯ ಹೊಂದಿಸಿಕೊಳ್ಳದೇ ಇರುವುದು ಯಾಕೆ ಎಂಬುದು ಎಲ್ಲರ ಮನದಲ್ಲೂ ಹುಟ್ಟಿಕೊಂಡಿರುವ ಪ್ರಶ್ನೆ. ಪರಭಾಷೆ ಕಲಾವಿದರು ಪುನೀತ್​ ಮೇಲಿನ ಪ್ರೀತಿ-ಗೌರವದಿಂದ ಬೆಂಗಳೂರಿಗೆ ಬಂದರು. ತಮಿಳಿನ ನಟರಾದ ಸೂರ್ಯ, ಸಿದ್ಧಾರ್ಥ್​, ತೆಲುಗು ಕಲಾವಿದರಾದ ರಾಣಾ ದಗ್ಗುಬಾಟಿ, ಅಖಿಲ್​ ಅಕ್ಕಿನೇನಿ ಮುಂತಾದವರು ಬಂದು ಪುನೀತ್​ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು. ವಿಡಿಯೋ ಬೈಟ್​ ಮೂಲಕ ಅಮಿತಾಭ್​ ಬಚ್ಚನ್​, ಕಮಲ್ ಹಾಸನ್​ ಅವರು ಮಾತನಾಡಿದರು. ಆದರೆ ಚಂದನವನದ ಒಂದಷ್ಟು ನಟರೇ ಗೈರಾಗಿದ್ದು ಅಭಿಮಾನಿಗಳಿಗೆ ಅಸಮಾಧಾನ ತರಿಸಿದೆ.

ಇಡೀ ದೇಶದ ಗಮನ ಸೆಳೆಯುವ ರೀತಿಯಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಿತು. ಪುನೀತ್​ ರಾಜ್​ಕುಮಾರ್​ ಅವರಿಗೋಸ್ಕರ ಎಲ್ಲರೂ ಒಂದೆಡೆ ಸೇರಲು ಸಿಕ್ಕಿದ ಅಪರೂಪದ ಅವಕಾಶ ಇದಾಗಿತ್ತು. ಇಂಥ ಕಾರ್ಯಕ್ರಮಕ್ಕೆ ಬರಲಾಗದೇ ನೆಪ ಹೇಳಿರುವುದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ.

ಇದನ್ನೂ ಓದಿ
Image
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
Image
Puneetha Parva: ‘ಮಿಸ್​ ಯೂ ಅಪ್ಪು’: ಪುನೀತ ಪರ್ವ ವೇದಿಕೆಯಲ್ಲಿ ‘ಪವರ್​ ಸ್ಟಾರ್​’ಗೆ ನುಡಿ ನಮನ ಸಲ್ಲಿಸಿದ ಗಣ್ಯರು
Image
‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ
Image
Puneetha Parva: ‘ಪುನೀತ ಪರ್ವ’ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ; ಅರಮನೆ ಮೈದಾನದಲ್ಲಿ ತಾರೆಯರ ಸಂಗಮ

ಅದೇನೇ ಇರಲಿ, ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಅಪ್ಪು ಕನಸಿನ ‘ಗಂಧದ ಗುಡಿ’ ಚಿತ್ರ ಸೂಪರ್​ ಹಿಟ್​ ಆಗಲಿ ಎಂದು ಹಾರೈಸಿದ್ದಾರೆ. ಅ.28ರಂದು ಥಿಯೇಟರ್​ನಲ್ಲಿ ಈ ಸಾಕ್ಷ್ಯಚಿತ್ರ ರಿಲೀಸ್​ ಆಗಲಿದ್ದು, ಪುನೀತ್​ ರಾಜ್​ಕುಮಾ​ರ್​ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುವುದು ಖಚಿತ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:47 pm, Sat, 22 October 22

ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ವಂಚನೆ ಕೇಸ್​ನಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸ್ಪಷ್ಟನೆ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಯಾರೇ ಗಣತಿ ಮಾಡಿಸಿದರೂ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು: ಶಾಸಕ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಪಂತ್ ಪವರ್​ಗೆ ಚಿನ್ನಸ್ವಾಮಿ ಮೇಲ್ಛಾವಣಿಗೆ ಬಿದ್ದ ಚೆಂಡು; ವಿಡಿಯೋ
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಶಿವಕುಮಾರ್ ಪ್ರಕಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ!
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮಳೆಯಾಗುವಾಗ ಹೆಬ್ಬಾಳ ರಸ್ತೆ ಅತಿಹೆಚ್ಚು ಪ್ರಭಾವಕ್ಕೊಳಾಗಾಗಲು ಹಲವು ಕಾರಣಗಳು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಮತ್ತೊಂದು ಭೂಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ, ವಿವರ ನೀಡಿದ ಗಂಗರಾಜು
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಕಾರ್ಯಕರ್ತನಾಗಿ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿರುವೆ: ನಿಖಿಲ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಅರಚುತ್ತಾ, ಕಿರುಚುತ್ತಾ, ರಿಷಭ್ ಪಂತ್ ರನೌಟ್ ತಪ್ಪಿಸಿದ ಸರ್ಫರಾಝ್ ಖಾನ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದು ಎರಡೂ ಪಕ್ಷಗಳಿಗೆ ಲಾಭವಾಗಿದೆ: ಯತ್ನಾಳ್
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಮೆಟ್ರೊ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ಹಳಿ ಮೇಲೆ ಮೂತ್ರ ಮಾಡಿದ ವ್ಯಕ್ತಿ