Loading video

ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಹೈಕಮಾಂಡ್ ಬೇಸರ; ಪರಮೇಶ್ವರ ಹೇಳಿದ್ದಿಷ್ಟು

|

Updated on: Jun 21, 2024 | 3:13 PM

ರಾಜ್ಯದಲ್ಲಿ ಎಐಸಿಸಿ ಕಮಿಟಿ ಮಾಡಿದ್ದು, ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ(G. Parameshwara) ಮಾತನಾಡಿ, ‘ಎಐಸಿಸಿ ಮಟ್ಟದಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 09 ಸ್ಥಾನ ಬಂದೆವು. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಎಂದು ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ.

ಬೆಂಗಳೂರು, ಜೂ.21: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಂದುಕೊಂಡಂತೆ ಕಾಂಗ್ರೆಸ್​​ ಗೆಲುವು ಸಾಧಿಸಿಲ್ಲ. ಹೀಗಾಗಿ ಎಐಸಿಸಿ ಕಮಿಟಿ ಮಾಡಿದ್ದು, ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ(G. Parameshwara) ಮಾತನಾಡಿ, ‘ಎಐಸಿಸಿ ಮಟ್ಟದಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 09 ಸ್ಥಾನ ಬಂದೆವು. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಎಂದು ಆತ್ಮಾವಲೋಕನ ಅಥವಾ ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಇದು ಇಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯಕ್ಕೂ ಮಾಡಿದ್ದಾರೆ ಎಂದರು.

ಈ ವರದಿ ಮೇಲೆ ಸಚಿವ ಸಂಪುಟ ಬದಲಾವಣೆ ಪ್ರಶ್ನೆಗೆ ಉತ್ತರಿಸಿ, ‘ಅದು ಹೈಕಮಾಂಡ್​ಗೆ ಬಿಟ್ಟ ವಿಚಾರವಾಗಿದೆ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತೋ ನಮಗೆ ಗೊತ್ತಾಗಲ್ಲ. ಫಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ.
ಎಐಸಿಸಿ ಇರೋದೆ ನಮ್ಮನ್ನ ರೆಗ್ಯುಲೇಟ್ ಮಾಡುವುದಕ್ಕೆ ಎಂದು ಸ್ಪಷ್ಟನೆ  ನೀಡಿದರು. ಇದೇ ವೇಳೆ ವಾಲ್ಮೀಕಿ ಪ್ರಕರಣ ತನಿಖೆ ವಿಚಾರ, ‘ಆ ತನಿಖೆ ನಡೀತಾ ಇದೆ. ಬ್ಯಾಂಕಿಂಗ್ ತನಿಖೆ ಸಿಬಿಐ ಮಾಡುತ್ತಿದ್ದರೆ, ನಿಗಮದ ವಿಚಾರ ಎಸ್​ಐಟಿ ಮಾಡ್ತಾ ಇದೆ. ಅಧಿಕೃತವಾಗಿ ಸಿಬಿಐ ನಮ್ಮನ್ನ ಏನೂ ಕೇಳಿಲ್ಲ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ