ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ದೆಹಲಿ ಭೇಟಿ ಬಗ್ಗೆ ಡಿಕೆಶಿ ಅಚ್ಚರಿಯ ಹೇಳಿಕೆ

Updated on: Dec 20, 2025 | 1:45 PM

ಸಿಎಂ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮಾತನ್ನು ವಿಧಾನಸಭೆಯೊಳಗೆ ನಿಂತು ಶುಕ್ರವಾರ ಅಲ್ಲಗಳೆದಿದ್ದರು. ಎರಡೂವರೆ ವರ್ಷದ ತೀರ್ಮಾನ ಆಗಿಲ್ಲ. ಐದು ವರ್ಷವೂ ನಾನೇ ಸಿಎಂ ಎಂದಿದ್ದರು. ಈ ಬೆನ್ನಲ್ಲೇ ಹೈಕಮಾಂಡ್ ಕಡೆಗೆ ಕಾಂಗ್ರೆಸ್​​​ನ ಗಮನ ಹೋಗಿದೆ. ಈ ನಡುವೆ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.

ಬೆಂಗಳೂರು, ಡಿಸೆಂಬರ್ 20: ಹೈಕಮಾಂಡ್ ನನ್ನ ಪರವಾಗಿದೆ. ಎರಡೂವರೆ ವರ್ಷದ ಅಗ್ರಿಮೆಂಟೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದರು. ಈ ಮಾತು ಸದ್ಯ ಅವರ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜೊತೆಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹೈಕಮಾಂಡ್​​ಗೂ ಸಂದೇಶ ರವಾನೆ ಆಗಿದೆ. ಈ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡುವಂತೆ ಮಾಡಿದೆ. ದೆಹಲಿಗೆ ತೆರಳುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹೈಕಮಾಂಡ್ ನಮ್ಮಿಬ್ಬರಿಗೂ ಏನೋ ಹೇಳಿದೆ. ಹೈಕಮಾಂಡ್ ನಾಯಕರು ಕರೆದಾಗ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ. ಆದರೆ ವರಿಷ್ಠರು ಹೇಳಿದ್ಯಾವ ವಿಚಾರ ಎಂಬ ಬಗ್ಗೆ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More