ಬೌರಿಂಗ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಂಡು ಕಿಡಿ ಕಾರಿದ ಹೈಕೋರ್ಟ್ ನ್ಯಾಯಾಧೀಶ ಬಿ ವೀರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 08, 2022 | 1:08 PM

ಸಾಕಷ್ಟು ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದು ಕೂಡ ಅವರಲ್ಲಿ ಅಸಮಾಧಾನವನ್ನುಂಟು ಮಾಡಿತು. ಯಾವುದಾದರೂ ಮೇಜರ್ ಕೇಸ್ ಬಂದರೆ ಏನು ಮಾಡುತ್ತೀರಿ ಅಂತ ಆಸ್ಪತ್ರೆಯಲ್ಲಿ ಲಭ್ಯರಿದ್ದ ವೈದ್ಯರನ್ನು ಪ್ರಶ್ನಿಸಿದರು.

ಬೆಂಗಳೂರು: ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಬಿ ವೀರಪ್ಪ ಅವರು ಶನಿವಾರ ಬೆಳಗ್ಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಮಹಿಳಾ ವಾರ್ಡ್ ಮತ್ತು ಅದರೊಳಗಿನ ಬಾತ್ ರೂಮ್ ಮಲಿನಗೊಂಡಿರುವುದನ್ನು ಕಂಡು ವಾರ್ಡನ್ ಮಹಿಳಾ ಸಿಬ್ಬಂದಿಯನ್ನು ಕರೆದು ನಯವಾಗಿಯೇ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಮ್ಮ ಅಂತ ಹೇಳಿದರು. ಸಾಕಷ್ಟು ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದು ಕೂಡ ಅವರಲ್ಲಿ ಅಸಮಾಧಾನವನ್ನುಂಟು ಮಾಡಿತು. ಯಾವುದಾದರೂ ಮೇಜರ್ ಕೇಸ್ ಬಂದರೆ ಏನು ಮಾಡುತ್ತೀರಿ ಅಂತ ಆಸ್ಪತ್ರೆಯಲ್ಲಿ ಲಭ್ಯರಿದ್ದ ವೈದ್ಯರನ್ನು ಪ್ರಶ್ನಿಸಿದರು.