ಮೈಸೂರು ಹೆದ್ದಾರಿಗಳು ಸ್ವಿಮ್ಮಿಂಗ್​ಪೂಲ್​ನಂತಾಗಿವೆ, ಸಂಸದ ಪ್ರತಾಪ್ ಸಿಂಹ ಬಂದು ಈಜಾಡಬಹುದು: ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2022 | 12:59 PM

ಹೆದ್ದಾರಿಗಳ ಗುಣಗಾನ ಮಾಡುತ್ತಾ ವಾಟ್ಸ್ಯಾಪ್ ನಲ್ಲಿ ಫೋಟೊಗಳನ್ನು ಹಾಕಿಕೊಳ್ಳುವ ಸಂಸದ ಪ್ರತಾಪ್ ಸಿಂಹ, ಅದೇ ಹೆದ್ದಾರಿಗಳು ಈಜುಕೊಳಗಳಾಗಿ ಮಾರ್ಪಟ್ಟಿವೆ ಅವರು ಬಂದು ಈಜಾಡಬಹುದು ಅಂತ ವ್ಯಂಗ್ಯವಾಗಿ ಹೇಳಿದರು.

ರಾಮನಗರದಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಕಾರಣ ಜಿಲ್ಲೆಯ ಹಲವಾರು ಭಾಗಗಳಲ್ಲಿ ರೈತರು ವಿಪರೀತ ಸಂಕಷ್ಟಕ್ಕೀಡಾಗಿದ್ದಾರೆ, ಬದುಕು ನಡೆಸುವುದೇ ದುರ್ಬರ ಅನ್ನುವ ಸ್ಥಿತಿ ಅವರಿಗೆ ಎದುರಾಗಿದೆ, ಹಾಗಾಗಿ ಅವರಿಗೆ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಂಗಳವಾರ ರಾಮನಗರದಲ್ಲಿ (Ramanagara) ಹೇಳಿದರು. ಮುಂದುವರಿದು ಮಾತಾಡಿದ ಅವರು ಹೆದ್ದಾರಿಗಳ ಗುಣಗಾನ ಮಾಡುತ್ತಾ ವಾಟ್ಸ್ಯಾಪ್ ನಲ್ಲಿ ಫೋಟೊಗಳನ್ನು ಹಾಕಿಕೊಳ್ಳುವ ಸಂಸದ ಪ್ರತಾಪ್ ಸಿಂಹ (Pratap Simha), ಅದೇ ಹೆದ್ದಾರಿಗಳು ಈಜುಕೊಳಗಳಾಗಿ ಮಾರ್ಪಟ್ಟಿವೆ ಅವರು ಬಂದು ಈಜಾಡಬಹುದು ಅಂತ ವ್ಯಂಗ್ಯವಾಗಿ ಹೇಳಿದರು.