ಹಿಜಾಬ್ ವಿವಾದ: ಪೋಷಕರು ಕಾಲೇಜು ಆವರಣ ನುಗ್ಗುವುದು, ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಗೂಂಡಾಗಳಂತೆ ವರ್ತಿಸುವುದು ಶುರುವಾಯಿತು!
ಕಾಲೇಜಿನ ಒಳಭಾಗದಲ್ಲಿ ಅಂದರೆ ಅದೇ ಮೆಟ್ಟಿಲುಗಳ ಮೇಲೆ ಬಿಳಿ ಟಿ ಶರ್ಟ್ ಧರಿಸಿ ಅದರ ಮುಂಭಾಗದಲ್ಲಿ ಶೇಡನ್ನು ತೂಗು ಹಾಕಿರುವ ವಿದ್ಯಾರ್ಥಿಯೊಬ್ಬನಿಗೆ ತನಗೆ ವಿದ್ಯೆ ಹಂಚುವ ಗುರುವಿನೊಂದಿಗೆ ಹೇಗೆ ಮಾತಾಡಬೇಕು, ಹೇಗೆ ವರ್ತಿಸಬೇಕು ಅನ್ನೋದು ಸಹ ಗೊತ್ತಿಲ್ಲ.
ಹಿಜಾಬ್ ವಿವಾದ (Hijab Row) ಕೊನೆಗೊಳ್ಳುವ ಒಂದೇ ಒಂದು ಸುಳಿವು ಸಹ ಸಿಗುತ್ತಿಲ್ಲ ಮಾರಾಯ್ರೇ. ರಾಜ್ಯದೆಲ್ಲೆಡೆ ಮುಸ್ಲಿಂ ಸಮುದಾಯದ (Muslim community) ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಇದನ್ನು ಪದೇಪದೆ ಹೇಳುತ್ತಿದ್ದೇವೆ, ಪರೀಕ್ಷೆಗಳು ನೆತ್ತಿಯ ಮೇಲಿವೆ. ಕೋವಿಡ್ ನಿಂದಾಗಿ ಶೈಕ್ಷಣಿಕ ವರ್ಷದ (academic year) ಅನೇಕ ದಿನಗಳು ಅದಾಗಲೇ ಹಾಳಾಗಿವೆ. ಇದು ಯಾರನ್ನೋ ವಹಿಸಿಕೊಂಡು ಹೇಳುವ ಮಾತಲ್ಲ, ಎಲ್ಲರೂ ಕೋರ್ಟ್ ಏನು ಹೇಳುತ್ತದೆ ಅದನ್ನು ಪಾಲಿಸಬೇಕು ಅನ್ನೋದು ಕನ್ನಡಿಗರ ಕಳಕಳಿಯಾಗಿದೆ. ಕರ್ನಾಟಕದಲ್ಲಿ ವಾಸ ಮಾಡುತ್ತಿರುವವರೆಲ್ಲ ಅವರ ಧರ್ಮ, ಜಾತಿ ಯಾವುದೇ ಆಗಿದ್ದರೂ ಕನ್ನಡಿಗರು. ಮಕ್ಕಳ ಭವಿಷ್ಯ ಹಾಳಾಗುತ್ತಿದೆ, ಪೋಷಕರು ದಯವಿಟ್ಟು ಯೋಚಿಸಬೇಕು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಕೇವಲ ಕಾಲೇಜು ಆವರಣ ತಲುಪಿದ ಬಳಿಕ ಹಿಜಾಬ್ ತೆಗೆದು ತರಗತಿಗಳನ್ನು ಅಟೆಂಡ್ ಮಾಡಲು ಹೇಳಲಾಗಿದೆ.
ಕೊಪ್ಪಳದ ಒಂದು ಕಾಲೇಜಿನಲ್ಲಿ ಉಂಟಾಗಿರುವ ಸನ್ನಿವೇಶವನ್ನೊಮ್ಮೆ ನೋಡಿ. ವಿದ್ಯಾರ್ಥಿ ಮತ್ತು ಅವರ ಪೋಷಕರು; ಪೊಲೀಸರು ಮತ್ತು ಅಧ್ಯಾಪಕ ವೃಂದದೊಂದಿಗೆ ವಾದ ಮಾಡುತ್ತಿದ್ದಾರೆ. ಅಮೇಲೆ ಪೋಷಕರು ಕಾಲೇಜಿನೊಳಗೆ ನುಗ್ಗಿ ತಮ್ಮ ಮಕ್ಕಳನ್ನು ಕ್ಲಾಸ್ ಗಳಿಗೆ ಹಾಜರಾಗಲು ಹೇಳುತ್ತಾರೆ. ಒಬ್ಬ ಮಹಿಳೆ ಒಂದು ಚಿಕ್ಕ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ತಳ್ಳಾಟ-ನೂಕಾಟದಲ್ಲಿ ಮಗು ಕಂಗಾಲಾಗಬಹುದು ಎಂಬ ಅರಿವು ಸಹ ಮಹಿಳೆಗಿಲ್ಲ.
ಕಾಲೇಜಿನ ಒಳಭಾಗದಲ್ಲಿ ಅಂದರೆ ಅದೇ ಮೆಟ್ಟಿಲುಗಳ ಮೇಲೆ ಬಿಳಿ ಟಿ ಶರ್ಟ್ ಧರಿಸಿ ಅದರ ಮುಂಭಾಗದಲ್ಲಿ ಶೇಡನ್ನು ತೂಗು ಹಾಕಿರುವ ವಿದ್ಯಾರ್ಥಿಯೊಬ್ಬನಿಗೆ ತನಗೆ ವಿದ್ಯೆ ಹಂಚುವ ಗುರುವಿನೊಂದಿಗೆ ಹೇಗೆ ಮಾತಾಡಬೇಕು, ಹೇಗೆ ವರ್ತಿಸಬೇಕು ಅನ್ನೋದು ಸಹ ಗೊತ್ತಿಲ್ಲ. ಸಹಪಾಠಿಗಳ ಮುಂದೆ ಅದರಲ್ಲೂ ವಿಶೇಷವಾಗಿ ಮಹಿಳಾ ಸಹಪಾಠಿಗಳ ಎದುರು ಹೀರೋಗಿರಿ ಮೆರೆಯಬೇಕೆಂಬ ಅವನ ಉದ್ದೇಶ ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಕಾಲೇಜು ಆವರಣಗಳಲ್ಲಿನ ವಾತಾವರಣ ಕೆಡುತ್ತಿದೆ ಮಾರಾಯ್ರೇ.
ಇದನ್ನೂ ಓದಿ: ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಅನುಮತಿ ಕೊಡಿ ಇಲ್ಲವೇ ಟಿಸಿಗಳನ್ನು ಕೊಟ್ಟುಬಿಡಿ ಅಂದರು ಅರಸೀಕೆರೆ ಪಿಯು ವಿದ್ಯಾರ್ಥಿನಿಯರು