AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನಾಕಾರರ ಕಿಚ್ಚಿಗೆ ಸುಟ್ಟು ಕರಕಲಾದ ನೇಪಾಳದ ಅತಿ ಎತ್ತರದ ಹೋಟೆಲ್

ಪ್ರತಿಭಟನಾಕಾರರ ಕಿಚ್ಚಿಗೆ ಸುಟ್ಟು ಕರಕಲಾದ ನೇಪಾಳದ ಅತಿ ಎತ್ತರದ ಹೋಟೆಲ್

ಸುಷ್ಮಾ ಚಕ್ರೆ
|

Updated on: Sep 10, 2025 | 5:26 PM

Share

ಇತ್ತೀಚಿನ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕಠ್ಮಂಡುವಿನಲ್ಲಿರುವ ಹಿಲ್ಟನ್ ಹೋಟೆಲ್ ಬೆಂಕಿಗೆ ಆಹುತಿಯಾದ ನಂತರ ಅದು ಸುಟ್ಟು ಕರಕಲಾಗಿದೆ. ಆ ಪ್ರದೇಶದ ಡ್ರೋನ್ ದೃಶ್ಯಗಳು ಇಲ್ಲಿವೆ. ನೇಪಾಳದ ಅತ್ಯಂತ ಎತ್ತರದ ಹೋಟೆಲ್ ಹಿಲ್ಟನ್ ಕಠ್ಮಂಡುವನ್ನು ಹೇಗೆ ನಿರ್ಮಿಸಲಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಕಠ್ಮಂಡುವಿನಲ್ಲಿರುವ ಹಿಲ್ಟನ್ ಹೋಟೆಲ್ ರಾತ್ರೋರಾತ್ರಿ ಸೃಷ್ಟಿಯಾಗಿರಲಿಲ್ಲ. ಶಂಕರ್ ಗ್ರೂಪ್ ಅಭಿವೃದ್ಧಿಪಡಿಸಿದ ಈ ಯೋಜನೆಯು ನೇಪಾಳದ ಆತಿಥ್ಯ ವಲಯವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತರುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ 2016ರಲ್ಲಿ ಮೊದಲು ಪ್ರಾರಂಭವಾಯಿತು.

ಕಠ್ಮಂಡು, ಸೆಪ್ಟೆಂಬರ್ 10: ನೇಪಾಳದಲ್ಲಿ (Nepal Protests) ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚಿಗೆ ಅನೇಕ ರಾಜಕೀಯ ನಾಯಕರ ಮನೆಗಳು, ಪಾರ್ಲಿಮೆಂಟ್, ವಿಮಾನ ನಿಲ್ದಾಣ, ಹೋಟೆಲ್​ಗಳು ಧ್ವಂಸವಾಗಿದೆ. ನಿನ್ನೆ ಪ್ರತಿಭಟನಾಕಾರರು ಕಠ್ಮಂಡುವಿನಲ್ಲಿರುವ ಹಿಲ್ಟನ್ ಹೋಟೆಲ್ ಅನ್ನು ನಾಶಪಡಿಸಿದ್ದಾರೆ. ಈ ಹೋಟೆಲ್ ನೇಪಾಳದ ಅತ್ಯಂತ ಎತ್ತರದ ಹೋಟೆಲ್ ಆಗಿದೆ. ಹಿಂಸಾತ್ಮಕ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ನೇಪಾಳದ ಅತಿ ಎತ್ತರದ ಹೋಟೆಲ್‌ಗಳಲ್ಲಿ ಒಂದಾದ ಹಿಲ್ಟನ್ ಸುಟ್ಟು ಕರಕಲಾಗಿದೆ. ಸಂಪೂರ್ಣ ಕರಕಲಾಗಿರುವ ಈ ಹೋಟೆಲ್​ನ ಡ್ರೋನ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಕರ್ಫ್ಯೂ, ಭದ್ರತಾ ಪಡೆಗಳೊಂದಿಗಿನ ಘರ್ಷಣೆಗಳು ಮತ್ತು ಸುಮಾರು 20 ಜನರ ಸಾವಿನ ಸಂಖ್ಯೆ ಹೆಚ್ಚುತ್ತಿರುವ ನಡುವೆ, ಹಿಲ್ಟನ್ ಹೋಟೆಲ್​ನ ದಹನವು ಈ ಪ್ರದೇಶದಾದ್ಯಂತ ಅಶಾಂತಿ ಎಷ್ಟರ ಮಟ್ಟಿಗೆ ಹರಡಿದೆ ಎಂಬುದರ ಭೀಕರ ಸಂಕೇತವಾಗಿದೆ. ಕಠ್ಮಂಡುವಿನಲ್ಲಿರುವ ಹಿಲ್ಟನ್ ಹೋಟೆಲ್ ರಾತ್ರೋರಾತ್ರಿ ಸೃಷ್ಟಿಯಾಗಲಿಲ್ಲ. ಶಂಕರ್ ಗ್ರೂಪ್ ಅಭಿವೃದ್ಧಿಪಡಿಸಿದ ಈ ಯೋಜನೆಯು ನೇಪಾಳದ ಆತಿಥ್ಯ ವಲಯವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತರುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ 2016ರಲ್ಲಿ ಪ್ರಾರಂಭವಾಯಿತು. ಸುಮಾರು 7 ವರ್ಷಗಳ ಪ್ರಯತ್ನ ಮತ್ತು ಸುಮಾರು 8 ಶತಕೋಟಿ ರೂ.ಗಳ ಹೂಡಿಕೆಯ ನಂತರ, ಈ ಎತ್ತರದ ಹೋಟೆಲ್ ಅಂತಿಮವಾಗಿ ಜುಲೈ 2024ರಲ್ಲಿ ಇದು ಉದ್ಘಾಟನೆಯಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ