ನಾದಿನಿಯನ್ನು 20ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಕೊಂದ ಬಾವ!
ವ್ಯಕ್ತಿಯೋರ್ವ ತನ್ನ ಸ್ವಂತ ತಮ್ಮನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ನಡೆದಿದೆ. ಗಣೇಶ್ ಗವಳಿ ಎನ್ನುವಾತನೇ ತನ್ನ ತಮ್ಮನ ಪತ್ನಿ ಗೀತಾಳನ್ನು 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಬೆಳಗಾವಿಯ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಗೀತಾ ಗವಳಿ ವಾಸ ಇದ್ದರು. ಆದರೇ, ಪತಿಗೆ ಸೇರಿದ 40* 12 ಅಡಿ ಅಗಲದ ಜಾಗಕ್ಕಾಗಿ ಪತಿಯ ಸೋದರ ಗಣೇಶ್ ಗವಳಿ ಹಾಗೂ ಗೀತಾ ಗವಳಿ ನಡುವೆ ವಿವಾದ ಶುರುವಾಗಿತ್ತು.
ಬೆಳಗಾವಿ, ಸೆಪ್ಟೆಂಬರ್ 10): ವ್ಯಕ್ತಿಯೋರ್ವ ತನ್ನ ಸ್ವಂತ ತಮ್ಮನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ನಡೆದಿದೆ. ಗಣೇಶ್ ಗವಳಿ ಎನ್ನುವಾತನೇ ತನ್ನ ತಮ್ಮನ ಪತ್ನಿ ಗೀತಾಳನ್ನು 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಬೆಳಗಾವಿಯ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಗೀತಾ ಗವಳಿ ವಾಸ ಇದ್ದರು. ಆದರೇ, ಪತಿಗೆ ಸೇರಿದ 40* 12 ಅಡಿ ಅಗಲದ ಜಾಗಕ್ಕಾಗಿ ಪತಿಯ ಸೋದರ ಗಣೇಶ್ ಗವಳಿ ಹಾಗೂ ಗೀತಾ ಗವಳಿ ನಡುವೆ ವಿವಾದ ಶುರುವಾಗಿತ್ತು. ಈ ಜಾಗದ ವಿವಾದದ ಬಗ್ಗೆ ಇಂದು ಬೆಳಿಗ್ಗೆ ಗಣೇಶ್ ಗವಳಿ ಹಾಗೂ ಗೀತಾ ಗವಳಿ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಮಾತಿನ ಚಕಮಕಿ ವೇಳೆಯೇ ಗೀತಾ ಗವಳಿಗೆ ಗಣೇಶ ಗವಳಿ ಬರೋಬ್ಬರಿ 20 ಭಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

