ಗ್ಯಾರಂಟಿ ಯೋಜನೆಯಿಂದ ಕೈದಿಗಳ ಸಂಬಳಕ್ಕೂ ಕುತ್ತು, 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ. ಸರ್ಕಾರ ನಿಗದಿಪಡಿಸಿದ ದಿನಗೂಲಿ 524 ರೂಪಾಯಿ ಆಗಿದ್ದು, ಇದರಿಂದ ಅವರ ಕುಟುಂಬಗಳು ಮತ್ತು ದೈನಂದಿನ ಅವಶ್ಯಕತೆಗಳಿಗೆ ಸಹಾಯವಾಗುತ್ತಿತ್ತು. ಗ್ಯಾರಂಟಿ ಯೋಜನೆಗಳ ಕಾರಣದಿಂದ ಹಣ ಬಿಡುಗಡೆಗೆ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ, ಜ.7: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ ಕಳೆದ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ. ಸರ್ಕಾರವು ದಿನಗೂಲಿಯಾಗಿ 524 ರೂಪಾಯಿ ನಿಗದಿಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಜೈಲಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇತನವು ಕೈದಿಗಳ ಕುಟುಂಬಗಳಿಗೆ ಆರ್ಥಿಕ ಸಹಾಯವಾಗುತ್ತದೆ ಮತ್ತು ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ಸದ್ಯ ಬೆಳಗಾವಿ ಜೈಲಿನಲ್ಲಿ ಮಾತ್ರ ಮೂರು ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಹಿಂಡಲಗಾ ಜೈಲು ಮಾತ್ರವಲ್ಲದೆ ರಾಜ್ಯದ ಇತರೆ ಜೈಲುಗಳಲ್ಲಿಯೂ ಇಂತಹದೇ ಸಮಸ್ಯೆ ಇದೆ ಎಂದು ವರದಿಯಾಗಿದೆ. ಸರ್ಕಾರಿ ಗ್ಯಾರಂಟಿ ಯೋಜನೆಗಳ ಹೊರೆಯಿಂದಾಗಿ ಈ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೈದಿಗಳು ಮತ್ತು ಜೈಲು ಅಧಿಕಾರಿಗಳು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ, ಹಣ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೈದಿಗಳು ಮನವಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

