Communal harmony in jail: ಆಗ್ರಾ ಜೈಲಿನ ಹಿಂದೂ ಮತ್ತು ಮುಸ್ಲಿಂ ಕೈದಿಗಳು ನವರಾತ್ರಿ ಉಪವಾಸ ವ್ರತ ಮತ್ತು ರೋಜಾ ಎರಡನ್ನೂ ಪಾಲಿಸುತ್ತಾರೆ!
ನವರಾತ್ರಿಯ ಉಪವಾಸಗಳಿಗಾಗಿ ಜೈಲು ಆಡಳಿತವು ಕೈದಿಗಳಿಗಾಗಿ ಹಣ್ಣು ಮತ್ತು ಹಾಲಿನ ವ್ಯವಸ್ಥೆ ಮಾಡಿದೆ. ಹಾಗೆಯೇ, ರೋಜಾ ಆಚರಿಸುವವರಿಗೆ ಉಪವಾಸ ಮುರಿಯಲು ಖರ್ಜೂರಗಳ ವ್ಯವಸ್ಥೆ ಮಾಡಲಾಗಿದೆ.
ಆಗ್ರಾ (ಉತ್ತರ ಪ್ರದೇಶ): ಕೋಮು ಸೌಹಾರ್ದತೆಗೆ (communal harmony) ಇದಕ್ಕಿಂತ ಉತ್ತಮ ನಿದರ್ಶನ ಮತ್ತೊಂದಿರಲಾರದು. ಆಗ್ರಾದ (Agra) ಸೆಂಟ್ರಲ್ ಜೈಲಿನಲ್ಲಿ ಮುಸ್ಲಿಂ ಸಮುದಾಯದ ಕೈದಿಗಳು ನವರಾತ್ರಿ ಉಪವಾಸ ವ್ರತ ಆಚರಿಸುತ್ತಿದ್ದರೆ, ಇದು ರಂಜಾನ್ ತಿಂಗಳು (month of Ramzan) ಕೂಡ ಆಗಿರುವದರಿಂದ ಹಿಂದೂ ಕೈದಿಗಳು ರೋಜಾ ಆಚರಿಸುತ್ತಿದ್ದಾರೆ. ದುಷ್ಟತನದ ಮೇಲೆ ಒಳ್ಳೆಯತನದ ಗೆಲುವನ್ನು ಸೂಚಿಸುವ 9-ದಿನಗಳ ‘ಚೈತ್ರ ನವರಾತ್ರಿ’ ಹಿಂದೂ ಆಚರಣೆ ಮಾರ್ಚ್ 22 ರಂದು ಆರಂಭವಾದರೆ, ಅದರ ಮರುದಿನ ಮುಸಲ್ಮಾನರ ಪವಿತ್ರ ತಿಂಗಳು ರಂಜಾನ್ ಶುರುವಾಗಿದೆ.
‘ನಮ್ಮ ದೇಶ ಹಲವಾರು ಜಾತಿ ಧರ್ಮಗಳ ಸಂಗಮವಾಗಿದೆ ಭಾರತ ಸಂವಿಧಾನ ಎಲ್ಲ ಧರ್ಮ, ಜಾತಿ, ಜನಾಂಗ ಒಂದಾಗಿ ಬಾಳುವುದನ್ನು ಸಾರುತ್ತದೆ. ಸಂವಿಧಾನವು ಎಲ್ಲರೂ ಒಂದಾಗಿ ಜೀವಿಸಬೇಕೆಂದು ಪ್ರತಿಪಾದಿಸುತ್ತದೆಯೇ ಹೊರತು, ಒಂದು ನಿರ್ದಿಷ್ಟ ಜನಾಂಗ, ಸಮುದಾಯ ಅಥವಾ ಪಂಗಡದವರು ಮಾತ್ರ ಐಕ್ಯತೆಯಿಂದ ಜೀವಿಸಬೇಕು ಎಂದು ಬೋಧಿಸುವುದಿಲ್ಲ. ಸಮುದಾಯಗಳ ನಡುವೆ ಯಾವುದೇ ಸಮಸ್ಯೆಯಿಲ್ಲದಾಗ ಮಾತ್ರ ಅಂಥ ಸನ್ನಿವೇಶ ಸೃಷ್ಟಿಯಾಗುವುದು ಸಾಧ್ಯ,’ ಎಂದು ಜೈಲು ಸೂಪರಿಂಟೆಂಡೆಂಟ್ ಆರ್ ಕೆ ಮಿಶ್ರಾ ಹೇಳುತ್ತಾರೆ.
ಇದನ್ನೂ ಓದಿ: Karnataka Assembly Polls 2023: 1972 ರಿಂದ 2018 ರವರೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸ
ಎರಡೂ ಧರ್ಮಗಳ ಕೈದಿಗಳು ಜೈಲು ಆವರಣದೊಳಗಿಳಿರುವ ದೇವಸ್ಥಾನದಲ್ಲಿ ಭಜನೆಯಲ್ಲಿ ನಿರತರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಎಲ್ಲ ಧರ್ಮಗಳನ್ನು, ಧಾರ್ಮಿಕ ಮನೋಭಾವನೆಗಳನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ ಅಂತ ಜೈಲಿನಲ್ಲಿರುವ ಮುಸ್ಲಿಂ ಕೈದಿ ನೌಶಾದ್ ಹೇಳುತ್ತಾರೆ.
‘ನಾವು ಎಲ್ಲ ಹಬ್ಬಗಳನ್ನು ಸಂತೋಷದಿಂದ ಆಚರಿಸುತ್ತಿದ್ದೇವೆ. ಜೈಲಿನೊಳಗೆ ಒಂದು ದೇವಸ್ಥಾನವಿದ್ದು ಅಲ್ಲಿ ನಡೆಸಲಾಗುವ ಪೂಜಾವಿಧಿಗಳಲ್ಲಿ ಎಲ್ಲ ಮುಸ್ಲಿಂ ಕೈದಿಗಳು ಭಾಗವಹಿಸುತ್ತಾರೆ. ನಾವು ರೋಜಾ ಉಪವಾಸವನ್ನು ಮುರಿಯುವಾಗ ಹಿಂದೂ ಕೈದಿಗಳು ನಮ್ಮ ಜೊತೆಗೂಡುತ್ತಾರೆ. ನಮ್ಮಲ್ಲಿ ತಾರತಮ್ಯ ಅನ್ನೋದೇ ಇಲ್ಲ, ಪ್ರತಿಯೊಬ್ಬ ಕೈದಿ ಸಂತೋಷದಿಂದಿದ್ದಾನೆ,’ ಎಂದು ನೌಶಾದ್ ಹೇಳುತ್ತಾರೆ.
ನವರಾತ್ರಿಯ ಉಪವಾಸಗಳಿಗಾಗಿ ಜೈಲು ಆಡಳಿತವು ಕೈದಿಗಳಿಗಾಗಿ ಹಣ್ಣು ಮತ್ತು ಹಾಲಿನ ವ್ಯವಸ್ಥೆ ಮಾಡಿದೆ. ಹಾಗೆಯೇ, ರೋಜಾ ಆಚರಿಸುವವರಿಗೆ ಉಪವಾಸ ಮುರಿಯಲು ಖರ್ಜೂರಗಳ ವ್ಯವಸ್ಥೆ ಮಾಡಲಾಗಿದೆ.
‘ಮೊದಲು ನವರಾತ್ರಿ ಶುರುವಾಯಿತು, ನಂತರ ನಾವು ರಂಜಾನ್ ಉಪವಾಸದಲ್ಲೂ ಪಾಲ್ಗೊಂಡೆವು. ಇಲ್ಲಿ ಹಿಂದೂ-ಮುಸಲ್ಮಾನ ಸಮುದಾಯಗಳಿಗೆ ಸೇರುದವರಾದ ನಾವು ಸಹಬಾಳ್ವೆ ನಡೆಸುತ್ತಿದ್ದೇವೆ. ನಾವು ಹಿಂದೂ ದೇವತೆಗೆ ಭಜೆನೆಗಳನ್ನು ಹಾಡುವಾಗ ಮುಸಲ್ಮಾನರು ನಮ್ಮ ಜೊತೆ ಸೇರುತ್ತಾರೆ. ನಾವು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದೇವೆ. ಜೈಲು ಆಧಿಕಾರಿ ಬಹಳ ಒಳ್ಳೆಯ ಸ್ವಭಾವದವರಾಗಿದ್ದು ನಮಗೆಲ್ಲ ಊಟದ ವ್ಯವಸ್ಥೆ ಮಾಡುತ್ತಾರೆ,’ ಎಂದು ಸೂರಜ್ ಹೆಸರಿನ ಕೈದಿ ಹೇಳುತ್ತಾರೆ.
ಚೈತ್ರ ನವರಾತ್ರಿ ಶುರುವಾದಾಗಿನಿಂದ ಕೈದಿಗಳಿಗಾಗಿ ‘ಭಗ್ವತ್ ಕಥಾ’ವನ್ನು ಜೈಲು ಆಡಳಿತ ಆಯೋಜಿಸಿದೆ. ಮಾರ್ಚ್ 31 ರಂದು ಒಂದು ವಿಶೇಷ ‘ಭಂಡಾರ’ವನ್ನು ಆಯೋಜಿಸಲು ಸಿದ್ಧತೆ ನಡೆದಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ