ನಮ್ಮ ದೇವರುಗಳು ಕೃಷ್ಣವರ್ಣೀಯರು, ಜಮೀರ್​ಗೆ ಅಧಿಕಾರದ ಸೊಕ್ಕು ಹೆಚ್ಚಾಗಿದೆ: ಸಿಟಿ ರವಿ

ನಮ್ಮ ದೇವರುಗಳು ಕೃಷ್ಣವರ್ಣೀಯರು, ಜಮೀರ್​ಗೆ ಅಧಿಕಾರದ ಸೊಕ್ಕು ಹೆಚ್ಚಾಗಿದೆ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 2:04 PM

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕೆಂದಿದ್ದರು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಅಜ್ಜಂಪುರ ಖಾದ್ರಿ ಹಸೀ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ, ಅದರೆ ತನ್ನ ಮೂಲ ಸಂಸ್ಕೃತಿಯನ್ನು ತಾನ್ಯಾವತ್ತೂ ತ್ಯಜಿಸಲ್ಲ ಅಂತ ಅಂಬೇಡ್ಕರ್ ಹೇಳಿದ್ದರು ಮತ್ತು ಥಾಟ್ಸ್ ಆಫ್ ಪಾಕಿಸ್ತಾನ್ ಪುಸ್ತಕದಲ್ಲಿ ಇಸ್ಲಾಂ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ರವಿ ಹೇಳಿದರು.

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕರಿಯ ಅಂತ ಕರೆದು ಜನಾಂಗೀಯ ನಿಂದನೆಯ ಅಪರಾಧವೆಸಗಿದ್ದಾರೆ, ಇದು ಅವರಲ್ಲಿರುವ ಸೊಕ್ಕನ್ನು ತೋರಿಸುತ್ತದೆ, ಹಿಂದೂಗಳು ಆರಾಧಿಸುವ ದೇವರುಗಳು ಕೃಷ್ಣವರ್ಣೀಯರು; ರಾಮ, ಕೃಷ್ಣ ಮತ್ತು ಪರಶಿವ-ಎಲ್ಲರೂ ಕಪ್ಪುಬಣ್ಣದವರು, ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಜಮೀರ್ ಗೆ ಜನ ಬುದ್ಧಿ ಕಲಿಸಬೇಕಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವನ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯರನ್ನ ಒಂದು ನಟೋರಿಯಸ್ ಗ್ಯಾಂಗ್​ ಖೆಡ್ಡಾಗೆ ಕೆಡವಿದೆ: ಹೊಸ ಬಾಂಬ್​ ಸಿಡಿಸಿದ ಸಿಟಿ ರವಿ ​