ದೀಢೀರನೆ ಕೇಂದ್ರ ಕಾರಾಗೃಹ ಭೇಟಿ ನೀಡಿದ ಜಿ ಪರಮೇಶ್ವರ್ ಜೈಲು ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿದರು

|

Updated on: Jul 09, 2024 | 6:15 PM

ನಿನ್ನೆ ಒಂದು ವಿಚಿತ್ರವಾದ ಸಂಗತಿ ಸೆಂಟ್ರಲ್ ಜೈಲು ಆವರಣದಲ್ಲಿ ನಡೆಯಿತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿರುವ ವಿನಯ್ ನನ್ನು ನೋಡಲು ಗೆಳತಿಯೊಬ್ಬರು ಬಂದಿದ್ದರು. ಅದರೆ ಅವರು ಜೈಲಿನ ಆವರಣದಲ್ಲಿರುವ ಸಂದರ್ಶಕರ ಕೋಣೆಯಲ್ಲಿ ಒಂದು ತಾಸು ಕೂತರೂ ವಿನಯ್ ಭೇಟಿಯಾಗಲು ಹೊರಬರಲಿಲ್ಲ. ಅಕೆ ನಿರಾಶೆಯಿಂದ ವಾಪಸ್ಸು ಹೋದರು.

ಆನೇಕಲ್ (ಬೆಂಗಳೂರು): ಗೃಹ ಸಚಿವ ಜಿ ಪರಮೇಶ್ವರ್ ಇಂದು ದಿಢೀರನೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರು. ಅವರೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮತ್ತ್ತು ಬೇರೆ ಅಧಿಕಾರಿಗಳು ಸಹ ಇದ್ದರು. ಸೆಂಟ್ರಲ್ ಜೈಲು ಆವರಣದಲ್ಲಿ ಪರಮೇಶ್ವರ್ ಅವರಿಗೆ ಜೈಲು ಪೊಲೀಸರು ಗೌರವ ರಕ್ಷೆ ನೀಡಿ ಗೌರವಿಸಿದರು. ಅದು ಸರಿ, ಗೃಹ ಸಚಿವರು ಯಾಕೆ ಇದ್ದಕ್ಕಿದ್ದಂತೆ ಬಂದರೆನ್ನುವುದು ಗೊತ್ತಾಗಲಿಲ್ಲ, ರಾಜ್ಯ ಸಚಿವ ಸಂಪುಟದಲ್ಲಿ ಗೃಹಸಚಿವರಾಗಿರುವವರು ಜೈಲುಗಳಿಗೆ ಆಗಾಗ್ಗೆ ಭೇಟಿ ನೀಡುವುದು ವಾಡಿಕೆ. ಅದೇ ಹಿನ್ನೆಲೆಯಲ್ಲಿ ಅವರು ಕಾರಾಗೃಹಕ್ಕೆ ಭೇಟಿ ನೀಡಿರಬಹುದು, ಜೈಲು ಆವರಣದಲ್ಲಿ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಮಾತಾಡುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಚಿತ್ರನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ನಂತರ ಈ ಕಾರಾಗೃಹ ಪ್ರತಿದಿನ ಸುದ್ದಿಯಲ್ಲಿದೆ. ಅವರನ್ನು ನೋಡಲು ಸಿನಿಮಾದವರು, ತಾಯಿ ಮತ್ತು ತಮ್ಮ, ಆಪ್ತರು ಮತ್ತು ಗೆಳೆಯ-ಗೆಳತಿಯರು ಜೈಲು ಆವರಣಕ್ಕೆ ಬಂದು ಹೋಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಎಸ್ಐಟಿ ಮತ್ತು ಸಿಬಿಐ ನಡೆಸುತ್ತಿವೆ, ಬಿಜೆಪಿಗೆ ಸಿಬಿಐ ಮೇಲೆ ಅನುಮಾನವೇ? ಜಿ ಪರಮೇಶ್ವರ್