ಅಂಜಲಿ ತಂಗಿ ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದು ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಗೆ ಧಾವಿಸಿದ ಪರಮೇಶ್ವರ್

|

Updated on: May 20, 2024 | 6:32 PM

ನೀನು ವಿಷ ಸೇವಿಸಿದ ವಿಷಯ ಗೊತ್ತಾದ ಕೂಡಲೇ ನಿನ್ನನ್ನು ನೋಡಲು ಬಂದಿರುವೆ, ನಾವೆಲ್ಲ ನಿನ್ನ ಜೊತೆ ಇದ್ದೇವೆ, ಯಾವುದಕ್ಕೂ ಹೆದರಬೇಡ, ನಿಮಗೆ ಎಲ್ಲ ರೀತಿಯಿಂದಲೂ ನೆರವಾಗುತ್ತೇವೆ, ಚುನಾವಣಾ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವುದರಿಂದ ಈಗ ಏನನ್ನೂ ಘೋಷಣೆ ಮಾಡಲಾಗಲ್ಲ, ಆದರೆ ಖಂಡಿತ ನೆರವು ಒದಗಿಸುತ್ತೇವೆ ಪರಮೇಶ್ವರ್ ಭರವಸೆ ನೀಡಿದರು.

ಹುಬ್ಬಳ್ಳಿ: ನಿಮಗೆ ನೆನಪಿರಬಹುದು, ನೇಹಾ ಹಿರೇಮಠ ಹತ್ಯೆಯಾದ ಬಳಿಕ ತನಗೆ ಫೋನ್ ಮಾಡಿ ಮಾತಾಡುವ ಸೌಜನ್ಯತೆಯನ್ನು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ತೋರಲಿಲ್ಲ ಎಂದು ನೇಹಾಳ ತಂದೆ ನಿರಂಜನ ಹಿರೇಮಠ (Niranjan Hiremath) ಹೇಳಿದ್ದನ್ನು ನಾವು ವರದಿ ಮಾಡಿದ್ದೆವು. ಆದರೆ, ಇವತ್ತು ಪರಮೇಶ್ವರ್ ಅಂಜಲಿ ಅಂಬಿಗೇರ್ (Anajali Ambiger) ಮನೆಗೆ ಭೇಟಿ ನೀಡಿದಾಗ ನಿರಂಜನ್ ಅದನ್ನು ಮರೆತು, ಸಚಿವರ ಜೊತೆ ಓಡಾಡಿದರು. ಹಾಗೇ ನೋಡಿದರೆ, ಅಂಜಲಿ ಹತ್ಯೆಯಾದಾಗಲೂ ಪರಮೇಶ್ವರ್ ಅವರ ಮನೆಗೆ ಬಂದಿಲಿಲ್ಲ. ಅದರೆ, ಅಕ್ಕನ ಭೀಕರ ಹತ್ಯೆಯನ್ನು ಕಣ್ಣಾರೆ ನೋಡಿದ ಯಶೋಧ ಅಂಬಿಗೇರ್ ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ ಸುದ್ದಿ ಗೊತ್ತಾದ ಕೂಡಲೇ ಪರೆಮೇಶ್ವರ್ ಇಲ್ಲಿಗೆ ದೌಡಾಯಿಸಿದರು. ಬಿಕ್ಕುತ್ತ್ತಿರುವ ಯಶೋಧಳ ಕಣ್ಣೀರು ಒರೆಸಿ, ತಲೆ ನೇವರಿಸಿ ಗೃಹ ಸಚಿವ ಸಾಂತ್ವನ ಹೇಳುವುದನ್ನು ಇಲ್ಲಿ ನೋಡಬಹುದು.

ಜೀವ ಕಳೆದುಕೊಳ್ಳುವ ಹುಚ್ಚು ಪ್ರಯತ್ನಕ್ಕೆ ಕೈ ಹಾಕಬಾರದು, ನೀನು ವಿಷ ಸೇವಿಸಿದ ವಿಷಯ ಗೊತ್ತಾದ ಕೂಡಲೇ ನಿನ್ನನ್ನು ನೋಡಲು ಬಂದಿರುವೆ, ನಾವೆಲ್ಲ ನಿನ್ನ ಜೊತೆ ಇದ್ದೇವೆ, ಯಾವುದಕ್ಕೂ ಹೆದರಬೇಡ, ನಿಮಗೆ ಎಲ್ಲ ರೀತಿಯಿಂದಲೂ ನೆರವಾಗುತ್ತೇವೆ, ಚುನಾವಣಾ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವುದರಿಂದ ಈಗ ಏನನ್ನೂ ಘೋಷಣೆ ಮಾಡಲಾಗಲ್ಲ, ಆದರೆ ಖಂಡಿತ ನೆರವು ಒದಗಿಸುತ್ತೇವೆ ಪರಮೇಶ್ವರ್ ಭರವಸೆ ನೀಡಿದರು. ಯಶೋಧಳ ಅಜ್ಜಿಗೂ ಸಚಿವ ಧೈರ್ಯದಿಂದರಲು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಸ್ಐಟಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ, ಪ್ರಜ್ವಲ್ ನನ್ನು ಸೆಕ್ಯೂರ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ: ಪರಮೇಶ್ವರ್

Follow us on