ಅರ್ಜಿ ಸಲ್ಲಿಸಲು ಬರುವ ಯುವಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸರಿಗೆ ಪರಮೇಶ್ವರ್ ಸೂಚನೆ
ಗೃಹ ಸಚಿವರ ನಿವಾಸ ಮುಂದೆ ಪೊಲೀಸ್ ದರ್ಪದ ಪ್ರಕರಣಗಳು ಪದೇಪದೆ ನಡೆಯುತ್ತ್ತಿದ್ದರೆ ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಕಾವಲು ನಿಲ್ಲುವ ಪೊಲೀಸರು ಇಂಥ ದುಸ್ಸಾಹಸಗಳಿಗೆ ಮುಂದಾಗಲ್ಲ. ನಮ್ಮದೂ ಗೃಹ ಇಲಾಖೆ ಎಂಬ ಧೋರಣೆ ಪೊಲೀಸರಿಗೆ ದರ್ಪ ಮೆರೆಯಲು ಪ್ರೇರೇಪಿಸುತ್ತಿದ್ದರೆ ಅದು ಸರಿಯಲ್ಲ.
ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೋ ಕೆಲಸದ ನಿಮಿತ್ತ ತಮ್ಮ ನಿವಾಸದ ಬಳಿ ಅರ್ಜಿ ಸಲ್ಲಿಸಲು ಬರುವ ಯುವಕರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ವಿಷಾದ ವ್ಯಕ್ತಪಡಿಸುತ್ತ ಪೊಲೀಸರು ಮಾಡಿದ್ದ್ದು ತಪ್ಪು ಎಂದರು. ನಂತರ ಯುವಕರ ಮೇಲೆ ದರ್ಪ ಮೆರೆದ ಪೊಲೀಸ್ ಇನ್ಸ್ಪೆಕ್ಟರ್ ನನ್ನು ಹತ್ತಿರಕ್ಕೆ ಕರೆದು ಮತ್ತೊಮ್ಮೆ ಹಾಗೆ ಮಾಡಬಾರದೆಂದು ಸೂಚನೆ ನೀಡಿದರಲ್ಲದೆ ವಶಕ್ಕೆ ಪಡೆದ ಯುವಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾರ್ಕಳ ಪ್ರಕರಣವನ್ನು ಸೆನ್ಸಿಟೈಸ್ ಮಾಡಲು ಬಿಡಲ್ಲ, ತಪ್ಪಿತಸ್ಥರಿಗೆ ಕಾನೂನುರೀತ್ಯಾ ಕ್ರಮ: ಪರಮೇಶ್ಬರ್