AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ? ಇಲ್ಲಿದೆ ವಿವರಣೆ

ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ? ಇಲ್ಲಿದೆ ವಿವರಣೆ

ಗಣಪತಿ ಶರ್ಮಾ
|

Updated on: Jun 15, 2026 | 6:27 AM

Share

ಯಜ್ಞ, ಯಾಗಾದಿ ಹೋಮ ಹವನಗಳಲ್ಲಿ ಉಪಯೋಗಿಸುವ ಸಮಿತ್ತುಗಳ ಮಹತ್ವವನ್ನು ಇಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಯಜ್ಞ ಕರ್ತನು ಸ್ವತಃ ಶ್ರಮ ವಹಿಸಿ ಅಶ್ವತ್ಥ, ಬಿಲ್ವ, ಶಮಿ, ಅರಳಿ ಮುಂತಾದ ಸಮಿತ್ತುಗಳನ್ನು ಸಂಗ್ರಹಿಸಿ ಅರ್ಪಿಸಿದಾಗ ಯಜ್ಞವು ಪರಿಪೂರ್ಣ ಫಲವನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಹಿಂದೂ ಸನಾತನ ಧರ್ಮದಲ್ಲಿ ಪಾಪ ಕರ್ಮಗಳನ್ನು ಕಳೆಯಲು, ಕಷ್ಟಗಳನ್ನು ನಿವಾರಿಸಲು ಮತ್ತು ಭಗವಂತನ ಸಂತೃಪ್ತಿಗಾಗಿ ಯಜ್ಞ, ಯಾಗಾದಿ ಹೋಮ ಹವನಗಳನ್ನು ನಡೆಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಹೋಮಗಳಿಗೆ ನಿರ್ದಿಷ್ಟ ಸಮಿಧೆ ಅಥವಾ ಸಮಿತ್ತುಗಳನ್ನು (ಪವಿತ್ರ ಮರದ ತುಂಡುಗಳು) ಬಳಸಲಾಗುತ್ತದೆ. ಹೋಮ ಹವನಗಳ ಸಂಪೂರ್ಣ ಫಲ ಪ್ರಾಪ್ತಿಗಾಗಿ, ಯಜ್ಞವನ್ನು ನಡೆಸುವ ಕರ್ತನು ಕನಿಷ್ಠ ಒಂದೆರಡು ಸಮಿತ್ತುಗಳನ್ನಾದರೂ ಸ್ವತಃ ತನ್ನ ಕೈಯಾರೆ ಸಂಗ್ರಹಿಸಿ ಅರ್ಪಿಸಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ ಎಂಬುದಾಗಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್​’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಅಂಗಡಿಯಿಂದ ಎಲ್ಲವನ್ನೂ ಖರೀದಿಸುವುದಕ್ಕಿಂತ ಅಥವಾ ಮತ್ತೊಬ್ಬರಿಗೆ ವಹಿಸುವುದಕ್ಕಿಂತ ವೈಯಕ್ತಿಕ ಶ್ರಮವು ಮಹತ್ವಪೂರ್ಣವಾಗಿದೆ. ಅಶ್ವತ್ಥ ವೃಕ್ಷ, ತುಳಸಿ, ಬಿಲ್ವ, ಅರಳಿಮರ, ಶಮಿಮರ ಮುಂತಾದ ವಿವಿಧ ಸಮಿತ್ತುಗಳನ್ನು ನಿರ್ದಿಷ್ಟ ದೇವತೆಗಳು ಮತ್ತು ಗ್ರಹಗಳಿಗೆ ಅನುಗುಣವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಸೂರ್ಯನಿಗೆ ಮದರ, ಚಂದ್ರನಿಗೆ ಪಲಾಶ, ಶನಿಗೆ ಶಮಿ. ಈ ಸಮಿತ್ತುಗಳನ್ನು ಭೂಸ್ಪರ್ಶ ಮಾಡದಂತೆ ತಂದು ಯಜ್ಞಕ್ಕೆ ಅರ್ಪಿಸಿದಾಗ ಯಜ್ಞವು ಹೆಚ್ಚು ಪರಿಪೂರ್ಣವಾಗಿ, ಶೀಘ್ರ ಫಲ ನೀಡುತ್ತದೆ ಎಂಬುದು ನಂಬಿಕೆ. ಋಷಿಮುನಿಗಳ ಕಾಲದಿಂದಲೂ ನಡೆದುಬಂದ ಈ ಪದ್ಧತಿಯು ನಮ್ಮ ಭಕ್ತಿ ಮತ್ತು ಸಮರ್ಪಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More