ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ, ಹೋಮ್​ ಗಾರ್ಡ್​​ಗೆ ಶ್ಲಾಘನೆ​

| Updated By: ವಿವೇಕ ಬಿರಾದಾರ

Updated on: Jan 09, 2025 | 1:03 PM

ದಾವಣಗೆರೆಯ ರೈಲು ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಫ್ಲಾಟ್​ಫಾರಂನಿಂದ ಕೆಳಗೆ ಬೀಳುತ್ತಿದ್ದನು. ಕೂಡಲೇ ಹೋಮ್ ಗಾರ್ಡ್ ಶಶಿಧರ್ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಈ ಧೈರ್ಯಶಾಲಿ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಮ್ ಗಾರ್ಡ್ ಶಶಿಧರ್ ಕಾರ್ಯಕಕ್ಕೆ ಸಾರ್ವಜನಿಕರು ಶ್ಲಾಘಿನೆ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ, ಜನವರಿ 09: ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ (Davangere Railway Station) ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಫ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ಹೋಮ್ ಗಾರ್ಡ್ (Home Gard) ಶಶಿಧರ್ ರಕ್ಷಣೆ ಮಾಡಿದ್ದಾರೆ. ಪ್ರಯಾಣಿಕ ಹುಬ್ಬಳಿಯಿಂದ ಮಂಗಳೂರಿಗೆ ಹೊರಟಿದ್ದನು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೈಲು ದಾವಣಗೆರೆಯಲ್ಲಿ ನಿಲುಗಡೆಯಾಗುತ್ತಿದ್ದಂತೆ ಉಡುಪಿ ಮೂಲದ ಪ್ರಯಾಣಿಕ ನೀರು ತರಲು ಕೆಳಗೆ ಇಳಿದಿದ್ದನು. ನೀರು ತೆಗೆದುಕೊಂಡು ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು. ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಅಯತಪ್ಪಿ ಬಿದ್ದ ಫ್ಲಾಟ್​ಫಾರಂನಿಂದ ಕೆಳಗೆ ಬೀಳುತ್ತಿದ್ದನು. ಪ್ರಯಾಣಿಕ ಬೀಳುತ್ತಿರುವುದನ್ನು ಕಂಡ ಹೋಮ್​ ಗಾರ್ಡ್​ ಶಶಿಧರ್ ತಕ್ಷಣ ಅವರನ್ನು​ ಮೇಲೆ ಎಳೆದುಕೊಂಡಿದ್ದಾರೆ. ರಕ್ಷಣೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಹೋಮ್ ಗಾರ್ಡ್ ಶಶಿಧರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Published on: Jan 09, 2025 01:01 PM