ಡಿಕೆ ಶಿವಕುಮಾರ್ ಮನೆಯಲ್ಲಿ ಮಾತುಕತೆ ನಡೆಸಿ ಹೊರಬಂದ ಜಿ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ
ಯಾವ ವಿಚಾರಗಳ ಬಗ್ಗೆ ಅವರ ನಡುವೆ ಚರ್ಚೆ ನಡೆಯಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮನೆಯಿಂದ ಇಬ್ಬರು ನಾಯಕರು ಒಟ್ಟಿಗೆ ಹೊರಬಂದರಾದರೂ ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಯಾರೂ ಮಾತಾಡಲಿಲ್ಲ. ಪತ್ರಕರ್ತರು ಗೃಹ ಸಚಿವರ ಕಾರಿನ ಬಳಿಗೋಡಿದ್ದು ನಿಜ, ಆದರೆ ಅವರು ಧಾವಂತದಲ್ಲಿದ್ದಂತೆ ಕಂಡರು.
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು (political activities) ಬಿರುಸುಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ ನಡೆಯಬಹುದು, ಹಾಗಾಗಿ ಎಲ್ಲ ಪಕ್ಷಗಳು ತಮ್ಮ ತಮ್ಮ ತಯಾರಿಯಲ್ಲಿ ತೊಡಗಿವೆ. ಜಗದೀಶ್ ಶೆಟ್ಟರ್ ರಾತ್ರೋರಾತ್ರಿ ಬಿಜೆಪಿಗೆ ವಾಪಸ್ಸು ಹೋಗಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಗಲಿಬಿಲಿ ಮೂಡಿಸಿದೆ. ಇಂದು ನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುತ್ತಿದೆ. ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಇದೆಲ್ಲ ಪಕ್ಷಗಳ ಚಟುವಟಿಕೆಗಳಾದರೆ ನಗರದಲ್ಲಿಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮನೆಗೆ ಭೇಟಿ ಸ್ವಲ್ಪಹೊತ್ತು ಮಾತುಕತೆ ನಡೆಸಿದರು. ಯಾವ ವಿಚಾರಗಳ ಬಗ್ಗೆ ಅವರ ನಡುವೆ ಚರ್ಚೆ ನಡೆಯಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮನೆಯಿಂದ ಇಬ್ಬರು ನಾಯಕರು ಒಟ್ಟಿಗೆ ಹೊರಬಂದರಾದರೂ ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಯಾರೂ ಮಾತಾಡಲಿಲ್ಲ. ಪತ್ರಕರ್ತರು ಗೃಹ ಸಚಿವರ ಕಾರಿನ ಬಳಿಗೋಡಿದ್ದು ನಿಜ, ಆದರೆ ಅವರು ಧಾವಂತದಲ್ಲಿದ್ದಂತೆ ಕಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ