ಅಂಜಲಿ ತಂಗಿಗೆ ಶಿಕ್ಷಣ, ಮನೆ ಮತ್ತು ನೌಕರಿಯ ಭರವಸೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್
ಈ ಪುಟ್ಟ ಹುಡುಗಿಗೆ ನೀತಿ ಸಂಹಿತೆ ಅನ್ನಲು ಬರಲ್ಲ, ಎಲೆಕ್ಷನಲ್ಲಿ ಯಾರು ಗೆದ್ರು ಯಾರು ಸೋತ್ರು ಅಂತ ಗೊತ್ತಾದ ಮ್ಯಾಗ ಮಿನಿಸ್ಟ್ರು ಫೋನ್ ಮಾಡ್ತೀನಿ ಅಂದಾರೀ ಎನ್ನುತ್ತಾಳೆ ಯಶೋಧ. ಅಂಜಲಿ ಅಂಬಿಗೇರ್ ಸಮಾಜದವರು ನೌಕರಿ, ಮನೆಯ ಜೊತೆ ₹ 50 ಲಕ್ಷ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಹುಬ್ಬಳ್ಳಿ: ಮೊನ್ನೆ ಹತ್ಯೆಯಾದ ಅಂಜಲಿ ಅಂಬಿಗೇರ್ (Anjali Ambiger) ಸಹೋದರಿಯರು ತೀರ ಮುಗ್ಧರು ಮತ್ತು ಅಮಾಯಕರು ಮಾರಾಯ್ರೇ. ನಿರ್ಮಲ ಮನಸ್ಸಿನ ಅವರ ಮಾತುಗಳು ನಿಷ್ಕಪಟ. ಇವತ್ತು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಂಜಲಿ ಚಿಕ್ಕ ತಂಗಿ ಯಶೋಧ (Yashoda), ಸರ್ಕಾರದಿಂದ ಎಲ್ಲ ರೀತಿಯ ನೆರವನ್ನು ಒದಗಿಸುವ ಭರವಸೆ ಸಚಿವ ಜಿ ಪರಮೇಶ್ವರ್ ನೀಡಿದ್ದಾರೆ ಮತ್ತು ಅವರ ಮಾತಿನ ಮೇಲೆ ತಮ್ಮ ಕುಟುಂಬಕ್ಕೆ ವಿಶ್ವಾಸವಿದೆ ಎಂದು ಹೇಳಿದಳು. ತನ್ನ ಓದಿಗೆ ಸರ್ಕಾರ ನೆರವಾಗುತ್ತದೆ, ಒಂದು ಮನೆಯನ್ನು ಒದಗಿಸುವುದರ ಜೊತೆಗೆ ತನಗೆ ನೌಕರಿ ಕೊಡಿಸುವ ಮಾತುಗಳನ್ನು ಪರಮೇಶ್ವರ್ ಹೇಳಿದ್ದಾರಂತೆ. ಈ ಪುಟ್ಟ ಹುಡುಗಿಗೆ ನೀತಿ ಸಂಹಿತೆ ಅನ್ನಲು ಬರಲ್ಲ, ಎಲೆಕ್ಷನಲ್ಲಿ ಯಾರು ಗೆದ್ರು ಯಾರು ಸೋತ್ರು ಅಂತ ಗೊತ್ತಾದ ಮ್ಯಾಗ ಮಿನಿಸ್ಟ್ರು ಫೋನ್ ಮಾಡ್ತೀನಿ ಅಂದಾರೀ ಎನ್ನುತ್ತಾಳೆ ಯಶೋಧ. ಅಂಜಲಿ ಅಂಬಿಗೇರ್ ಸಮಾಜದವರು ನೌಕರಿ, ಮನೆಯ ಜೊತೆ ₹ 50 ಲಕ್ಷ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅದೆಲ್ಲ ಆಮ್ಯಾಗ್ ಹೇಳ್ತೀನಿ ಅಂದಾರೀ ಮಿನಿಸ್ಟ್ರು ಎಂದು ಯಶೋಧ ಹೇಳಿದಳು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಶ್ವನಿಂದ ಅಕ್ಕನ ಜೀವಕ್ಕೆ ಅಪಾಯವಿದೆ ಅಂತ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ: ಅಂಜಲಿ ಸಹೋದರಿಯರು