ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಜನರಿಗೆ ಗಾಯ
ಹೆಜ್ಜೇನು ದಾಳಿಯಿಂದ 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.
ಮಂಡ್ಯ: ಹೆಜ್ಜೇನು (Honey Bee) ದಾಳಿಯಿಂದ 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಂಡವಪುರ (Pandavpur) ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ. ಹಾರೋಹಳ್ಳಿಯ ಧರ್ಮರಾಜ್ ಅನಾರೋಗ್ಯದ ಹಿನ್ನಲೆ ಮೃತ ಪಟ್ಟಿದ್ದರು. ಇಂದು (ನ.1) ಮದ್ಯಾಹ್ನ ಶವ ಸಂಸ್ಕಾರ ಕಾರ್ಯವಿತ್ತು. ಈ ಹಿನ್ನಲೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಹೆಜ್ಜೇನು ದಾಳಿ ನಡೆಸಿವೆ. ಸದ್ಯ ಗಾಯಾಳುಗಳನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Published On - 8:18 pm, Wed, 2 November 22