ಹಾಂಗ್ಕಾಂಗ್ನಲ್ಲಿ ಭೀಕರ ಅಗ್ನಿ ದುರಂತ; ಅಪಾರ್ಟ್ಮೆಂಟ್ಗೆ ಬೆಂಕಿ ತಗುಲಿ 55 ಜನ ಸಾವು
ಹಾಂಗ್ ಕಾಂಗ್ ಅನ್ನು ಆವರಿಸಿದ ಮಾರಕ ಬೆಂಕಿ ಅಪಘಾತದಲ್ಲಿ 55 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. 2,000 ಅಪಾರ್ಟ್‌ಮೆಂಟ್ ಬ್ಲಾಕ್‌ಗಳನ್ನು ಹೊಂದಿರುವ 8 ಕಟ್ಟಡ ಸಂಕೀರ್ಣಕ್ಕೆ ಬೆಂಕಿ ತಗುಲಿತು. ಹಾಂಗ್ ಕಾಂಗ್‌ನಲ್ಲಿ ಅತ್ಯಂತ ಜನನಿಬಿಡ ವಸತಿ ಕಟ್ಟಡಗಳು ಮತ್ತು ಗಗನಚುಂಬಿ ಕಟ್ಟಡಗಳಿವೆ. ಅನೇಕ ನಿವಾಸಿಗಳು ವೃದ್ಧರಾಗಿದ್ದರು, ಇದು ಸ್ಥಳಾಂತರಿಸುವವರಿಗೆ ಕೆಲಸವನ್ನು ತುಂಬಾ ಕಷ್ಟಕರವಾಗಿಸಿತು. ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಹಾಂಗ್ಕಾಂಗ್, ನವೆಂಬರ್ 27: ಬುಧವಾರ ಮಧ್ಯಾಹ್ನ ಹಾಂಗ್ ಕಾಂಗ್‌ನಲ್ಲಿ (Hong Kong Fire Accident) ಎತ್ತರದ 8 ಅಪಾರ್ಟ್‌ಮೆಂಟ್ ಕಟ್ಟಡಗಳಿರುವ ಕಾಂಪ್ಲೆಕ್ಸ್ಗೆ ಬೆಂಕಿ ಬಿದ್ದಿದೆ. ಈ ಅಪಾರ್ಟ್ಮೆಂಟ್ಗಳಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 4,600ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ಈ ಬೆಂಕಿ ಅವಘಡದಲ್ಲಿ ಒಂದೆರಡು ಕಟ್ಟಡಗಳು ಪೂರ್ತಿ ಸುಟ್ಟು ಕರಕಲಾಗಿವೆ. ಇವುಗಳೆಲ್ಲವೂ 20 ಮಹಡಿಗಿಂತಲೂ ಎತ್ತರದ ಅಪಾರ್ಟ್ಮೆಂಟ್ಗಳಾಗಿವೆ. ಈ ಬೆಂಕಿ ಅವಘಡದಲ್ಲಿ ಇದುವರೆಗೆ 55 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಈ ವಿಷಯದಲ್ಲಿ ಪೊಲೀಸರು ಇಲ್ಲಿಯವರೆಗೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಕಳೆದ 6 ದಶಕಗಳಲ್ಲಿ ಹಾಂಗ್ಕಾಂಗ್ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತ ಇದಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ, ಸುಮಾರು 300 ಜನರು ಇನ್ನೂ ಪತ್ತೆಯಾಗಲಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

