Shwetha Srivatsav: ಮದ್ವೆ ನಂತರ ಚಿತ್ರರಂಗಕ್ಕೆ ಬಂದು ಶ್ವೇತಾ ಶ್ರೀವಾತ್ಸವ್​ ಎದುರಿಸಿದ ಚಾಲೆಂಜ್​ ಏನು? ಇಲ್ಲಿದೆ ಓಪನ್​ ಟಾಕ್​

| Updated By: ಮದನ್​ ಕುಮಾರ್​

Updated on: Jun 25, 2022 | 2:39 PM

Hope Movie: ‘ಹೋಪ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಟಿ ಶ್ವೇತಾ ಶ್ರೀವಾತ್ಸವ್​ ಅವರು ಮನಸಾರೆ ಮಾತನಾಡಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್​ ಅವರು ಕನ್ನಡ ಚಿತ್ರರಂಗದಲ್ಲಿ (Sandalwood) ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಮದುವೆ ಆದ ನಂತರ. ಆ ರೀತಿ ಎಂಟ್ರಿ ಪಡೆದಾಗ ಹೀರೋಯಿನ್​ ಆಗಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ನಂತರ ಶ್ವೇತಾ ಶ್ರೀವಾತ್ಸವ್ (Shwetha Srivatsav) ಅವರು ಮಗುವಿಗೆ ಜನ್ಮ ನೀಡಿದರು. ತಾಯಿ ಆದ ಬಳಿಕವೂ ಅವರು ನಟನೆಗೆ ಮರಳಿದ್ದಾರೆ. ‘ಹೋಪ್​’ (Hope Movie) ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದು, ತಾವು ದಾಟಿ ಬಂದ ಎರಡು ಚಾಲೆಂಜಿಂಗ್​ ಘಟ್ಟಗಳ ಬಗ್ಗೆ ವಿವರಿಸಿದ್ದಾರೆ. ತಮ್ಮ ವೃತ್ತಿಬದುಕಿಗೆ ಬೆಂಬಲವಾಗಿ ನಿಂತವರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಶ್ವೇತಾ ಶ್ರೀವಾತ್ಸವ್‌ ಹುಟ್ಟುಹಬ್ಬಕ್ಕೆ ‘ಹೋಪ್’ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆ

Hope Movie: ಪ್ರತಿಭಾವಂತ ಕಲಾವಿದರ ‘ಹೋಪ್​’ ಸಿನಿಮಾ ಜುಲೈ 8ಕ್ಕೆ ತೆರೆಗೆ; ಈ ಚಿತ್ರದ ಕಥಾಹಂದರ ಏನು?